ನವದೆಹಲಿ: 27 ವರ್ಷಗಳ ಕಾಲ ಜನರಿಗೆ ಇಂಟರ್ ನೆಟ್ ಸೇವೆ ಒದಗಿಸಲು ಪ್ಲ್ಯಾಟ್ ಫಾರಂ ಆಗಿದ್ದ ಇಂಟರ್ ನೆಟ್ ಎಕ್ಸ್ ಪ್ಲೋರರ್ ಈಗ ಸೇವೆ ಸ್ಥಗಿತಗೊಳಿಸಿದೆ.
ಆರಂಭದಲ್ಲಿ ಜನರಿಗೆ ವೇದಿಕೆಯಾಗಿದ್ದ ಇಂಟರ್ ನೆಟ್ ಎಕ್ಸ್ ಪ್ಲೋರರ್ ಬಳಿಕ ಮೊಝಿಲ್ಲಾ ಫಯರ್ ಫೋಕ್ಸ್, ಕ್ರೋಮ್ ನಿಂದಾಗಿ ಹಿಂದೆ ಉಳಿಯಿತು. ಈಗಂತೂ ಇದನ್ನು ಉಪಯೋಗಿಸುವವರೇ ಇಲ್ಲ ಎಂಬಂತಾಗಿತ್ತು. ಈಗ ಇದು ತೆರೆಮರೆಗೆ ಸರಿದಿದೆ.
ಇಂಟರ್ ನೆಟ್ ಎಕ್ಸ್ ಪ್ಲೋರರ್ ದಕ್ಷಿಣ ಕೊರಿಯಾದ ಜುಂಗ್ ಕಿ ಯಂಗ್ ಎನ್ನುವ ವ್ಯಕ್ತಿ ಸರಿಯಾಗಿ ವಿದಾಯ ಹೇಳಿದ್ದಾನೆ. ಇಂಟರ್ ನೆಟ್ ಎಕ್ಸ್ ಪ್ಲೋರರ್ ಹೆಸರಿನಲ್ಲಿ 25 ಸಾವಿರ ರೂ.ನಲ್ಲಿ ಸಮಾಧಿ ಕಟ್ಟಿ ತಕ್ಕ ಗೌರವ ಕೊಟ್ಟಿದ್ದಾನೆ. ಈ ಸಮಾಧಿಯ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.