ಆನ್ ಲೈನ್ ಮೀಟಿಂಗ್ ನಲ್ಲೇ ಸರಕಾರಿ ಅಧಿಕಾರಿಯೊಬ್ಬ ಮಹಿಳೆಯೊಂದಿಗೆ ಬಟ್ಟೆ ಬಿಚ್ಚಿ ಲವ್ವಿ ಡವ್ವಿ ನಡೆಸಿದ್ದಾನೆ.
ಈಗಲೂ ಬಹುತೇಕ ಕಡೆಗಳಲ್ಲಿ ವರ್ಕ್ ಫ್ರಂ ಹೋಮ್ ನಡೆಯುತ್ತಾ ಇದೆ. ಹೀಗಾಗಿ ಝೂಮ್ ಆ್ಯಪ್ ನಲ್ಲಿ ಆನ್ ಲೈನ್ ಮೀಟಿಂಗ್ ನಡೆಯುತ್ತಿತ್ತು.
ಮೀಟಿಂಗ್ ನಡೆಯುತ್ತಿರುವಾಗಲೇ ಕ್ಯಾಮೆರಾ ಬಂದ್ ಮಾಡುವ ಬದಲು ಎಡವಟ್ಟು ಮಾಡಿಕೊಂಡ ಸರಕಾರಿ ಅಧಿಕಾರಿಯೊಬ್ಬ ತನ್ನ ಕಾರ್ಯದರ್ಶಿಯ ಬಟ್ಟೆ ಬಿಚ್ಚಿ ಲವ್ವಿ ಡವ್ವಿ ನಡೆಸಿದ್ದಾನೆ.
ಇದನ್ನು ಮೀಟಿಂಗ್ ನಲ್ಲಿದ್ದ ಬೇರೆ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ಫಿಲಿಪ್ಪೈನ್ಸ್ ನಲ್ಲಿ ಘಟನೆ ನಡೆದಿದ್ದು, ಸರಸ ಸಲ್ಲಾಪ ನಡೆಸಿದ್ದ ಅಧಿಕಾರಿಯನ್ನು ಸರಕಾರಿ ಕೆಲಸದಿಂದ ವಜಾಗೊಳಿಸಲಾಗಿದೆ.