ಇಸ್ಲಾಮಾಬಾದ್ : ಸಾರ್ಜಜನಿಕ ಸ್ಥಳದಲ್ಲಿ ನಾಚಿಕೆಯಿಲ್ಲದೆ ಅಪ್ಪಿಕೊಂಡು ಕಿಸ್ ಮಾಡುತ್ತಿರುವ ಜೋಡಿಗಳನ್ನು ಇಸ್ಲಾಮಾಬಾದ್ ಪೊಲೀಸರು ಬಂದಿಸಿದ್ದಾರೆ.
18-19 ವರ್ಷದ ಯುವಕ ಹಾಗೂ ಯುವತಿ ಸಾರ್ಜಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿ ಯಾರ ಭಯವಿಲ್ಲದೇ ಅಪ್ಪಿಕೊಂಡು ಚುಂಬನ ಮಾಡಿದ್ದಾರೆ. ಸಾರ್ಜಜನಿಕ ಸ್ಥಳದಲ್ಲಿ ಈ ಜೋಡಿ ಹೀಗೆ ಮಾಡುತ್ತಿರುವದನ್ನ ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರೂ ಕೂಡ ಅದನ್ನು ಗಮನಿಸದ ಈ ಜೋಡಿ ತಮ್ಮ ಕಾರ್ಯದಲ್ಲಿಯೇ ನಿರತರಾಗಿದ್ದರು.
ನಂತರ ಪೊಲೀಸರು ಈ ಜೋಡಿಯನ್ನು ಬಂಧಿಸಿ ಅಶ್ಲೀಲ ಕೃತ್ಯಗಳ ಕಾಯ್ದೆ ಅಡಿ ಕೇಸ್ ದಾಖಲಿಸಿದ್ದಾರೆ. ಇದೀಗ ಈ ಜೋಡಿ ಜಾಮೀನು ಪಡೆದುಕೊಂಡಿದ್ದಾರೆ. ಆದರೆ ಪೊಲೀಸರು ಹಾಕಿರುವ ಈ ಕೇಸ್ ಸಾಬೀತಾದರೆ ಈ ಯುವ ಜೋಡಿ ಮೂರು ತಿಂಗಳು ಜೈಲುವಾಸ ಅಥವಾ ದಂಡ ಇಲ್ಲವೇ ಇವೆರಡನ್ನೂ ಅನುಭವಿಸಬೇಕಾಗುತ್ತದೆ ಎಂದು ಅಲ್ಲಿನ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ