ಪಾಕ್ ವಿರುದ್ಧ ಅಮೇರಿಕ ಮತ್ತೆ ಅಸಮಾಧಾನ ವ್ಯಕ್ತಪಡಿಸಿದೆ. ಡಾನ್ ಪತ್ರಕರ್ತನ ಮೇಲೆ ನಿರ್ಬಂಧ ಹೇರಿರುವುದನ್ನು ಅಮೇರಿಕ ತೀವ್ರವಾಗಿ ಖಂಡಿಸಿದೆ.
ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವರ್ತನೆ ಬೇಡ. ಅಮೇರಿಕ ಡಾನ್ ಪತ್ರಕರ್ತನ ಪರವಾಗಿ ನಿಲ್ಲುತ್ತದೆ. ಇದನ್ನು ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪಿಸಲಾಗತ್ತೆ ಎಂದು ಅಮೇರಿಕಾ ಖಡಕ್ ಆಗಿ ಹೇಳಿದೆ.
ಪಾಕಿಸ್ತಾನದ ಡಾನ್ ಪತ್ರಿಕೆಯ ಅಂಕಣಕಾರ ಮತ್ತು ವರದಿಗಾರರಾಗಿರುವ ಸಿರಿಲ್ ಅಲ್ಮೇಡಾ ಅವರಿಗೆ ಪಾಕ್ ದೇಶದಿಂದ ಹೊರಹೋಗದಂತೆ ನಿರ್ಬಂಧ ಹೇರಿದೆ. ಪಾಕ್ ಸರ್ಕಾರ ಮತ್ತು ಸೇನೆಯ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಮೇಲೆ ವರದಿ ಮಾಡಿದ್ದಕ್ಕೆ ಅವರ ಮೇಲೆ ಈ ನಿರ್ಬಂಧ ಹೇರಲಾಗಿದೆ.
ಸಿರಿಲ್ ಅಲ್ಮೋಡಾ ಅವರನ್ನು ' ಎಕ್ಸಿಟ್ ಕಂಟ್ರೋಲ್ ಲಿಸ್ಟ್'ದೆ ಸೇರಿಸಲಾಗಿದ್ದು ಈ ಪಟ್ಟಿಯಲ್ಲಿ ಇರುವವರು ದೇಶದಿಂದ ಹೊರ ಹೋಗುವಂತಿಲ್ಲ.
ಮಂಗಳವಾರ ಮುಂಜಾನೆ ಕುಟುಂಬದ ಸದಸ್ಯರ ಜತೆ ದೀರ್ಘಾವಧಿಯ ಪ್ರವಾಸವನ್ನು ಕೈಗೊಳ್ಳಲಿದ್ದ ಅಲ್ಮೇಡಾ ಅವರಿಗೆ ಸೋಮವಾರ ಸಾಯಂಕಾಲ ನೀವು ವಿದೇಶಕ್ಕೆ ಹಾರುವಂತಿಲ್ಲ ಎಂಬ ಆದೇಶ ದೊರಕಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪತ್ರಕರ್ತ,' ಇದು ನನಗೆ ನೋವನ್ನುಂಟು ಮಾಡಿದೆ. ದೇಶ ಬಿಟ್ಟು ಹೋಗುವ ಉದ್ದೇಶ ನನಗಿಲ್ಲ, ಇದು ನನ್ನ ತವರು', ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ