ರಷ್ಯಾದ ಸುದ್ದಿ ಪ್ರಸಾರ ಸಂಸ್ಥೆಯೊಂದರ ವಿಡಿಯೋ ಒಂದು ವಿಶೇಷ ಕಾರಣಕ್ಕಾಗಿ ಸುದ್ದಿಯಾಗಿದೆ. ನಿರೂಪಕಿ ಸುದ್ದಿ ಓದುತ್ತಿದ್ದಾಗ ನಾಯಿಯೊಂದು ಸ್ಟುಡಿಯೋಗೆ ನುಗ್ಗಿದ ಘಟನೆ ನಡೆದಿದೆ.
ಮಾಸ್ಕೋದ ಡೆಮಾಲಿಶನ್ ಬಗ್ಗೆ ನಿರೂಪಕಿ ಸುದ್ದಿ ಓದುತ್ತಿದ್ದಾಗ ನಾಯಿ ಬೊಗಳುವ ಶಬ್ದ ಡೆಸ್ಕ್ ಅಡಿಯಿಂದ ಕೇಳಿಬಂದಿದೆ. ಗಾಬರಿಗೊಂಡ ಆಂಕರ್ ತಿರುಗಿನೋಡಿದಾಗ ಕಪ್ಪು ಬಣ್ಣದ ಲ್ಯಾಬ್ರಡಾರ್ ನಾಯಿ ಕೆಳಗಿನಿಂದ ಡೆಸ್ಕ್ ಮೇಲೆ ಬಂದು ಕೂತಿದೆ.
ನಿರೂಪಕಿಯ ಭಯದಿಂದಲೇ ಪಕ್ಕಕ್ಕೆ ಬಾಗಿ ಸುದ್ದಿ ಓದಲು ಮುಂದಾಗಿದ್ದಾರೆ. ಪಕ್ಕದಲ್ಲಿ ಕುಳಿತಿದ್ದ ನಾಯಿ ಮತ್ತಷ್ಟು ಚೇಷ್ಟೆ ಮಾಡಿದಾಗ ಹೊರಗೆ ಕರೆದೊಯ್ಯಲಾಗಿದೆ. ಭಯದಲ್ಲಿಯೇ ಕುಳಿತಿದ್ದ ಆಂಕರ್ ಆ ಬಳಿಕ ನಾಯಿಯ ತುಂಟಾಟ ನೋಡಿ ನಸು ನಕ್ಕಿದ್ದಾರೆ. ಟಿವಿ ನೋಡುತ್ತಿದ್ದ ಪ್ರೇಕ್ಷಕರಿಗೂ ಕೆಲ ಕಾಲ ಎಂಟರ್ ಟೈನ್ ಮೆಂಟ್ ಸಿಕ್ಕಿದ್ದು ಸುಳ್ಳಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ