ನ್ಯೂಯಾರ್ಕ್ : ಏಷ್ಯಾದ ಅತಿ ದೊಡ್ಡ ಸ್ಲಂನಲ್ಲಿ ಕೋವಿಡ್ ನಿಯಂತ್ರಣ ಮಾಡಿದ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸೆ ವ್ಯಕ್ತಪಡಿಸಿದೆ.
ಸೋಂಕು ನಿಯಂತ್ರಣ ಮಾಡಿದ ಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ.ಟೆಡ್ರೋಸ್ ಶ್ಲಾಘಾನಿಸಿದ್ದಾರೆ. ಸೋಂಕು ತೀವ್ರಗೊಂಡರೂ ಮತ್ತೆ ನಿಯಂತ್ರಣಕ್ಕೆ ತರಬಹುದು. ಇದಕ್ಕೆ ಜಗತ್ತಿನಲ್ಲಿ ಹಲವು ಉದಾಹರಣೆಗಳು ಸಿಗುತ್ತವೆ.
ವಿಯೆಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್, ನ್ಯೂಜಿಲೆಂಡ್ , ಇಟಲಿ, ಸ್ಪೇನ್, ಸಥ್ ಕೊರಿಯಾದಲ್ಲಿ ನಿಯಂತ್ರಣಕ್ಕೆ ಬಂದಿದೆ. ಮುಂಬೈನ ಧಾರಾವಿ ಸ್ಲಂ ಉತ್ತಮ ಉದಾಹರಣೆ. ಧಾರಾವಿಯಂತೂ ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಅಂಥದ್ದರಲ್ಲಿ ಲ್ಲಿ ಕೊರೊನಾ ಚೈನ್ ಬ್ರೇಕ್ ಮಾಡಲಾಗಿದೆ ಎಂದು ಅವರು ಹೊಗಳಿದ್ದಾರೆ.