Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರತಿ ಟಿಬೆಟ್ ಕುಟುಂಬದ ಓರ್ವ ಚೀನಾ ಸೇನೆ ಸೇರ್ಪಡೆ ಕಡ್ಡಾಯ

ಪ್ರತಿ ಟಿಬೆಟ್ ಕುಟುಂಬದ ಓರ್ವ ಚೀನಾ ಸೇನೆ ಸೇರ್ಪಡೆ ಕಡ್ಡಾಯ
ನವದೆಹಲಿ , ಶನಿವಾರ, 31 ಜುಲೈ 2021 (17:40 IST)
ನವದೆಹಲಿ (ಜು.31):  ಇತ್ತೀಚಿನ ಪೂರ್ವಲಡಾಖ್ ಸಂಘರ್ಷದಲ್ಲಿ ಭಾರತದ ವಿಶೇಷ ಪಡೆಯ ಸಿಬ್ಬಂದಿಯಿಂದ ಭರ್ಜರಿ ಏಟು ತಿಂದಿದ್ದ ಚೀನಾ, ಮುಂದಿನ ದಿನಗಳಲ್ಲಿ ಇಂಥ ಮುಖಭಂಗ ತಪ್ಪಿಸಲು ಟಿಬೆಟಿಯನ್ ಯೋಧರನ್ನು ಬಳಸಿಕೊಳ್ಳಲು ನಿರ್ಧರಿಸಿದೆ.

•ಪೂರ್ವಲಡಾಖ್ ಸಂಘರ್ಷದಲ್ಲಿ ಭಾರತದ ವಿಶೇಷ ಪಡೆಯ ಸಿಬ್ಬಂದಿಯಿಂದ ಭರ್ಜರಿ ಏಟು ತಿಂದಿದ್ದ ಚೀನಾ
•ಮುಂದಿನ ದಿನಗಳಲ್ಲಿ ಇಂಥ ಮುಖಭಂಗ ತಪ್ಪಿಸಲು ಟಿಬೆಟಿಯನ್ ಯೋಧರನ್ನು ಬಳಸಿಕೊಳ್ಳಲು ನಿರ್ಧರಿಸಿದೆ
•ಟಿಬೆಟ್ನಲ್ಲಿ ಪ್ರತಿ ಕುಟುಂಬದ ಓರ್ವ ಸದಸ್ಯ ಚೀನಾ ಸೇನೆ ಸೇರುವುದನ್ನು ಕಡ್ಡಾಯ ಮಾಡಿದೆ
ತನ್ನ ವಶದಲ್ಲಿರುವ ಟಿಬೆಟ್ನಲ್ಲಿ ಪ್ರತಿ ಕುಟುಂಬದ ಓರ್ವ ಸದಸ್ಯ ಚೀನಾ ಸೇನೆ ಸೇರುವುದನ್ನು ಕಡ್ಡಾಯ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಪೂರ್ವ ಲಡಾಖ್ ಸಂಘರ್ಷದ ವೇಳೆ ಭಾರತ ತನ್ನ ಸ್ಪೆಷಲ್ ಫ್ರಂಟಿಯರ್ಸ್ ಪಡೆಯನ್ನು ನಿಯೋಜಿಸಿತ್ತು. ವಲಸಿಗ ಟಿಬೆಟಿಯನ್ ಸಮುದಾಯದವರನ್ನೇ ಆಯ್ದು ರಚಿಸಿರುವ ಈ ಪಡೆ ಲಡಾಖ್ನ ಅತ್ಯಂತ ಸಂಕಷ್ಟಮಯ ವಾತಾವರಣವನ್ನೂ ಸುಲಭವಾಗಿ ಎದುರಿಸಬಲ್ಲದು.
ಹೀಗಾಗಿಯೇ ಪೂರ್ವ ಲಡಾಖ್ನಲ್ಲಿ ಚೀನಾ ಯೋಧರು ಹಿನ್ನಡೆ ಅನುಭವಿಸಿದ್ದರು. ಹೀಗಾಗಿ ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಟಿಬೆಟ್ ಯುವಕರನ್ನು ಆಯ್ದು ಅವರಿಗೆ ವಿಶೇಷ ತರಬೇತಿ ನೀಡಿದ್ದ ಚೀನಾ, ಇದೀಗ ಇಂಥ ಯೋಧರ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ


Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಕ್ಕೆ ಆ.31ರವರೆಗೂ ವಿಮಾನಯಾನ ನಿಷೇಧ