ಇತ್ತೀಚಿಗಷ್ಟೇ ಪ್ರಬಲ ಭೂಕಂಪದಿಂದ ತತ್ತರಿಸಿ ಹೋಗಿರುವ ಇಟಲಿಯಲ್ಲಿ ಇಂದು ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ.
ಭೂಕಂಪದ ತೀವೃತೆ ರಿಕ್ಟರ್ ಮಾಪಕದಲ್ಲಿ 66.6ರಷ್ಟಿತ್ತು ಎಂದು ತಿಳಿದು ಬಂದಿದೆ.
ಭೂಕಂಪನದ ಕೇಂದ್ರಬಿಂದು ಪ್ರಾದೇಶಿಕ ಕೇಂದ್ರ ಪೆರುಗಿಯಾದಿಂದ 68 ಕೀಲೋಮೀಟರ್ ಪೂರ್ವ ಆಗ್ನೇಯದಲ್ಲಿ, ಸಣ್ಣ ಪಟ್ಟಣ ನಾರ್ಸಿಯಾದ ಬಳಿ ಇತ್ತು ಎಂದು ಅಮೇರಿಕಾ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.
ಅನೇಕ ಕಟ್ಟಡಗಳು ಧರೆಗುರುಳಿದ್ದು, ಅದರಡಿ ಹಲವರು ಸಿಲುಕಿದ್ದಾರೆಂದು ಹೇಳಲಾಗುತ್ತಿದ್ದು, ಹೆಚ್ಚಿನ ವಿವರಗಳು ಇನ್ನು ಲಭ್ಯವಾಗಬೇಕಿದೆ.
ಕಳೆದ ಬುಧವಾರ ಇಟಲಿಯ ಕೇಂದ್ರಭಾಗದಲ್ಲಿ ನಡೆದ ಭೂಕಂಪದಲ್ಲಿ 250ಕ್ಕೂ ಹೆಚ್ಚು ಜನರು ದುರ್ಮರವನ್ನಪ್ಪಿದ್ದರು.360ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸಾವಿರಕ್ಕೂ ಅಧಿಕ ಮಂದಿ ಮನೆ ತೊರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ