ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ವಯಸ್ಸಿಗೆ ಬಾರದ ಹೆಣ್ಣು ಮಕ್ಕಳ ಭವಿಷ್ಯವು ಕತ್ತಲೆಯಲ್ಲಿದೆ.ಅದರಲ್ಲೂ ಪರಿಸ್ಥಿತಿ ಎಷ್ಟು ಭೀಕರವಾಗಿದೆಯೆಂದರೆ 20 ದಿನದ ಹೆಣ್ಣುಮಗುವಿಗೆ ಮದುವೆಯ ಪ್ರಸ್ತಾಪವನ್ನು ಮಾಡಲಾಗುತ್ತಿದೆ. ಅಫ್ಘಾನಿಸ್ತಾನದ ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ ಪ್ರಕಾರ, ಕೆಲವು ಕುಟುಂಬಗಳು ವರದಕ್ಷಿಣೆಗೆ ಬದಲಾಗಿ ವಯಸ್ಸಿಗೆ ಬಾರದ ಹೆಣ್ಣುಮಕ್ಕಳಿಗೆ ವಿವಾಹ ಮಾಡುತ್ತಿದ್ದಾರೆ.