ತೆಹ್ರಾನ್ : ಕೆಲ ಮಹಿಳೆಯರು ಹಿಜಬ್ ಧರಿಸದ ಕಾರಣ ಇರಾನ್ನಲ್ಲಿ ಕಾಲ ಕಾಲಕ್ಕೆ ಮಳೆ ಆಗುತ್ತಿಲ್ಲವೆಂದು ಇರಾನ್ನ ಧಾರ್ಮಿಕ ಮುಖಂಡ ಮಹ್ಮದ್ ಮೆಹದಿ ಹುಸ್ಸೇನಿ ಹಮೆದಾನಿ ಹೇಳಿಕೆ ನೀಡಿದ್ದಾರೆ.
ಸಮಾಜದಲ್ಲಿ ಹಿಜಬ್ ಆಚರಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಹಿಜಬ್ ತೆಗೆದು ಮಹಿಳೆಯರಿಗೆ ಸೇವೆ ಸಲ್ಲಿಸುವ ಅಂಗಡಿಗಳು ಮತ್ತು ಮಾಲ್ಗಳಿಗೆ ಎಚ್ಚರಿಕೆ ನೀಡಬೇಕು ಎಂದು ತಿಳಿಸಿದರು.
ಈಗ ಇರಾನ್ ಸುಪ್ರೀಂ ಲೀಡರ್ ಖಮೇನಿಗೆ ಅತ್ಯಂತ ಆಪ್ತ. ಮಹ್ಮದ್ ಮಹೆದಿ ಹೇಳಿಕೆ ಪ್ರಸ್ತಾಪಿಸಿ ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ. ಹಿಜಬ್ಗೂ ಮಳೆಗೂ ಏನ್ ಸಂಬಂಧ ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಇರಾನ್ನಲ್ಲಿಯೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿಭಟನೆಗಳು ಇನ್ನಷ್ಟು ತೀವ್ರ ಸ್ವರೂಪ ಪಡೆಯುತ್ತಿವೆ.