ಇಸ್ರೋ:ಭಾರತದ ಅತ್ಯಾಧುನಿಕ ದೂರಸಂಪರ್ಕ ಉಪಗ್ರಹ ಜಿ ಸ್ಯಾಟ್-17 ನ್ನು ಇಸ್ರೋ ಫ್ರೆಂಚ್ ಗಯಾನಾದ ಕೌರಾವ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ನಡೆಸಿದೆ.
ಇಂದು ನಸುಕಿನ 2.29 ರ ವೇಳೆಗೆ ಫ್ರಾನ್ಸ್ ವಿಜ್ಞಾನಿಗಳ ಸಹಭಾಗಿತ್ವದಲ್ಲಿ 3,477 ಕೆಜಿ ತೂಕದ ಜಿ ಸ್ಯಾಟ್-17 ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಉಡಾವಣೆ ಮಾಡಲಾಗಿದೆ. ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್(ಜಿಟಿಒ)ಗೆ ಉಡಾಯಿಸಿದ್ದ 17 ಟೆಲಿಕಮ್ಯುನಿಕೇಷನ್ ಸ್ಯಾಟಲೈಟ್ ಗಳ ಇಸ್ರೊದ ಕಾರ್ಯವೈಖರಿಯನ್ನು ಜಿಸ್ಯಾಟ್-17 ಬಲಗೊಳಿಸಲಿದೆ.
ವಿವಿಧ ಸಂವಹನ ಸೇವೆಗಳನ್ನು ಒದಗಿಸುವ ಸಿ ಬ್ಯಾಂಡ್ ಮತ್ತು ಎಸ್ ಬ್ಯಾಂಡ್, ಸಹಜ ಸ್ಥಿತಿಯ ಸಿ ಬ್ಯಾಂಡ್ ಗಳಲ್ಲಿ ಪೇ ಲೋಡ್ ಗಳನ್ನು ಈ ಉಪಗ್ರಹ ಹೊತ್ತೊಯ್ದಿದ್ದು, ಇದು ಈಗಾಗಲೇ ನಿಗಧಿಯಾಗಿರುವ ಉಪಗ್ರಹಗಳ ಮುಂದುವರಿಕೆ ಸೇವೆಗೆ, ನಮ್ಮ ಟ್ರಾನ್ಸ್ಪಾಂಡರ್ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ಮೊಬೈಲ್ ಉಪಗ್ರಹ ಸೇವೆಗಳಿಗೆ ಮತ್ತು ಅಂಟಾರ್ಟಿಕಾ ಪ್ರದೇಶಗಳಿಗೆ ನಮ್ಮ ಹಾರಿಜಾನ್ ವಿಸ್ತರಿಸಲು ಸಹಕಾರಿಯಾಗಲಿದೆ.