ಪಾಕಿಸ್ತಾನದಲ್ಲಿ ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದ ಭಾರತ ಮೂಲದ ಮಹಿಳೆ ಉಜ್ಮಾರಿಗೆ ಭಾರತಕ್ಕೆ ಹಿಂದಿರುಗಲು ಇಸ್ಲಾಮಾಬಾದ್ ಹೈಕೋರ್ಟ್ ಅನುಮತಿ ನೀಡಿದೆ.
ನ್ಯಾಯಮೂರ್ತಿ ಮೊಹ್ಸಿನ್ ಅಖ್ತರ್ ಖಯಾನಿ ಉಜ್ಮಾರ ವಲಸೆ ಪತ್ರವನ್ನ ಹಿಂದಿರುಗಿಸಿದ್ದು, ಭಾರತಕ್ಕೆ ತೆರಳಲು ಅನುಮತಿ ನೀಡಿದ್ದಾರೆ. ಅಷ್ಟೇ ಅಲ್ಲ, ುಜ್ಮಾ ಭಾರತಕ್ಕೆ ಹಿಂದಿರುಗಲು ವಾಘಾ ಗಡಿವರೆಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಆದೇಶಿಸಲಾಗಿದೆ.
20 ವರ್ಷದ ಉಜ್ಮಾ ಮೇ ತಿಂಗಳ ಆರಂಭದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು. ಬಳಿಕ ತಹೀರ್ ಅಲಿ ಎಂಬಾತ ಗನ್ ಪಾಯಿಂಟ್`ನಲ್ಲಿ ನನ್ನನ್ನ ಬಲವಂತವಾಗಿ ಮದುವೆಯಾಗಿದ್ದು, ಲೈಂಗಿಕ ಹಿಂದೆ ನೀಡಿದ್ದಾನೆ ಎಂದು ಕೋರ್ಟ್`ನಲ್ಲಿ ದಾವೆ ಹೂಡಿದ್ದರು. ನನಗೆ ದೆಹಲಿಗೆ ತೆರಳಲು ಭದ್ರತೆ ಒದಗಿಸಬೇಕು ಮತ್ತು ನನ್ನ ವಲಸೆ ಪತ್ರಗಳ ನಕಲು ನೀಡಬೇಕೆಂದು ಕೋರಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ