ತಮ್ಮ ವಿರುದ್ಧ ಹೋರಾಡುತ್ತಿರುವ ಕುರ್ದಿಷ್ ಡ್ಯಾನಿಶ್ ಯುವತಿಗೆ ಜಗತ್ತಿನ ಅತಿ ಅಪಾಯಕಾರಿ ಭಯೋತ್ಪಾದಕ ಸಂಘಟನೆ ಎನಿಸಿಕೊಂಡಿರುವ ಐಸಿಸ್ 1 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.
ಮಹಿಳೆಯರ ಹಕ್ಕು ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಡುವ ಗುರಿಯನ್ನಿಟ್ಟುಕೊಂಡಿರುವ ಕುರ್ದಿಷ್- ಡ್ಯಾನಿಶ್ ಯುವತಿ ಜೊಅನ್ನಾ ಪಲಾನಿ (23) ಸಿರಿಯಾ ಮತ್ತು ಇರಾಕ್‌ನಲ್ಲಿ ಉಗ್ರ ಸಂಘಟನೆ ವಿರುದ್ಧ ಹೋರಾಡುವ ಉದ್ದೇಶದಿಂದ 2014ರಲ್ಲಿ ಪದವಿ ವಿದ್ಯಾಭ್ಯಾಸವನ್ನು ತ್ಯಜಿಸಿದ್ದರು.
ಸದ್ಯ ಕೋಪನ್‌ಹೆಗನ್‌ನ ಜೈಲಿನಲ್ಲಿ ಬಂಧಿಯಾಗಿರುವ ಆಕೆ ನ್ಯಾಯಾಲಯದಲ್ಲಿ ವಿಚಾರಣೆಯನ್ನೆದುರಿಸುತ್ತಿದ್ದಾರೆ. ಕುರ್ದಿಷ್ ಕ್ರಾಂತಿಗೆ ಕೈ ಜೋಡಿಸಿದ್ದ ಆಕೆಗೆ ಜೂನ್ 2015ರಲ್ಲಿ ಆಕೆಗೆ 12 ತಿಂಗಳು ದೇಶ ಬಿಟ್ಟು ಹೋಗದಂತೆ ಡೆನ್ಮಾರ್ಕ್ ಸರ್ಕಾರ ಆದೇಶಿಸಿತ್ತು. ಆದರೆ ಆಕೆ ಈ ಆದೇಶವನ್ನು ಉಲ್ಲಂಘಿಸಿದ್ದರಿಂದ ಜೈಲು ಪಾಲಾಗಿದ್ದಾಳೆ. ಇಂದಿನಿಂದ ಆಕೆಯ ಪ್ರಕರಣದ ವಿಚಾರಣೆ ಪ್ರಾರಂಭವಾಗಲಿದ್ದು ತಪ್ಪು ಸಾಬೀತಾದರೆ ಮಧ್ಯಪ್ರಾಚ್ಯ ಡೆನ್ಮಾರ್ಕ್‌ನಿಂದ ಐಸಿಸ್ ಉಗ್ರಗಾಮಿಗಳನ್ನು ನಿಗ್ರಹಿಸಲು ರಚಿಸಲಾದ ಹೊಸ ಕಾನೂನಿನ ಪ್ರಕಾರ ಆಕೆಗೆ ಎರಡು ವರ್ಷ ಜೈಲು ಶಿಕ್ಷೆಯಾಗಬಹುದು.
ಡೆನ್ಮಾರ್ಕ್‌ಗೆ ಹಿಂತಿರುಗಿದ್ದಾಗಿನಿಂದ ಪಲಾನಿ ಜೀವಬೆದರಿಕೆಯನ್ನು ಎದುರಿಸುತ್ತಲೇ ಇದ್ದಾರೆ. ಮತ್ತೀಗ ಐಸಿಸ್ ಸಾಮಾಜಿಕ ಮಾಧ್ಯಮಗಳು ಆಕೆಯ ಹತ್ಯೆಗೆ 1 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿವೆ. ಉಗ್ರ ಸಂಘಟನೆ ವಿವಿಧ ಭಾಷೆಗಳಲ್ಲಿ ಈ ಪೋಸ್ಟ್‌ನ್ನು ಪ್ರಕಟಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ