Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಸಿಸ್ ಮುಖ್ಯಸ್ಥ ಅಬು-ಬಕ್ರ ಅಲ್-ಬಾಗ್ದಾದಿಗೆ ವಿಷ ಪ್ರಾಶನ?

ಐಸಿಸ್ ಮುಖ್ಯಸ್ಥ ಅಬು-ಬಕ್ರ ಅಲ್-ಬಾಗ್ದಾದಿಗೆ ವಿಷ ಪ್ರಾಶನ?
ದುಬೈ , ಮಂಗಳವಾರ, 4 ಅಕ್ಟೋಬರ್ 2016 (16:02 IST)
ವಿಶ್ವವನ್ನು ಭಯದ ನೆರಳಲ್ಲಿಟ್ಟಿರುವ ಭಯೋತ್ಪಾದಕ ಸಂಘಟನೆ ಐಸಿಸ್ ಮುಖ್ಯಸ್ಥ ಅಬು-ಬಕ್ರ ಅಲ್-ಬಾಗ್ದಾದಿ ಮತ್ತು ಆತನ ಮೂವರು ಸಹಚರರಿಗೆ ವಿಷ ಪ್ರಾಶನ ಮಾಡಿಸಿ ಹತ್ಯೆಗೈಯ್ಯಲು ಯತ್ನಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಮೂವರನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು ಚಿಕಿತ್ಸೆ ನೀಡಿಸಲಾಗುತ್ತಿದೆ ಎಂದು ಅರೇಬಿಕ್ ಮತ್ತು ಇರಾನಿಯನ್ ಭಾಷೆಯ ಅನೇಕ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದೆ.
ಈ ವಂಚನೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಐಸಿಸ್ ಉಗ್ರರು ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 
 
ವಿಶ್ವದ ಮೋಸ್ಟ್ ವಾಟೆಂಡ್ ಟೆರರಿಸ್ಟ್ ಗಳ ಪಟ್ಟಿಯಲ್ಲಿರುವ ಅಬು ಬಕ್ರ್ ಅಲ್ ಬಗ್ದಾದಿ ತಲೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಲಾಗಿದ್ದು, ಅಮೆರಿಕಾ ಹಾಗೂ ಅದರ ಮಿತ್ರ ಪಡೆಗಳು ಈತನನ್ನು ಜೀವಂತವಾಗಿ ಸೆರೆ ಹಿಡಿಯಲು ತೀವ್ರ ಕಾರ್ಯಾಚರಣೆ ನಡೆಸಿದ್ದವು.
 
ಅನೇಕ ಬಾರಿ ಗಂಭೀರವಾಗಿ ಗಾಯಗೊಂಡಿದ್ದ ಬಗ್ದಾದಿ ವಿಶ್ವದ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದು ಆತನ ತಲೆಗೆ 10 ಮಿಲಿಯನ್ ಟಾಲರ್ ಬಹುಮಾನವನ್ನು ಘೋಷಿಸಲಾಗಿದೆ.  
 
ಇರಾಕ್‌ನ ಬಿಹಾಜ್ ಜಿಲ್ಲೆಯಲ್ಲಿ ಐಸಿಸ್ ಉನ್ನತ ನಾಯಕರ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ವಿಷ ಪ್ರಾಶನ ಮಾಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಸಭೆಯಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬ ತನ್ನನ್ನು ತಾನು ಸ್ಪೋಟಿಸಿಕೊಂಡ ಪರಿಣಾಮ 16 ಉಗ್ರರು ಸ್ಥಳದಲ್ಲೇ ದುರ್ಮರವನ್ನಪ್ಪಿದ್ದಾರೆ ಎಂದು ಇರಾಕ್ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂಕೋರ್ಟ್: ತಮಿಳುನಾಡಿಗೆ 36 ಸಾವಿರ ಕ್ಯೂಸೆಕ್ ನೀರು ಹರಿಸಲು ಒಪ್ಪಿದ ಸರಕಾರ