ಸಾವು ಯಾವಾಗ ಬೇಕಾದರು ಬರಬಹುದು. ಇದೇ ದಿನ, ಇದೇ ಸಮಯ ಅಂತ ಹೇಳಲಾಗುವುದಿಲ್ಲ. ಹಾಗಾಗಿ ಗೊತ್ತಿಲ್ಲದೆ ಬರುವ ಸಾವಿನಿಂದ ರಕ್ಷಿಸಿಕೊಳ್ಳಲು ಜನರು ಶತ ಪ್ರಯತ್ನ ಮಾಡುತ್ತಾರೆ.
ಅದಕ್ಕೆ ಉತ್ತಮ ಉದಾಹರಣೆ ಎಂದರೆ ಕೊರೋನಾ. ಈ ಮಹಾಮಾರಿಯಿಂದ ಅನೇಕ ದೇಶಗಳು ತತ್ತರಿಸಿವೆ. ಸಾಕಷ್ಟು ಸಾವು ನೋವು ಕಂಡಿವೆ. ಕೊರೋನಾ ಅಂಟಿರುವ ಮೃತದೇಹವನ್ನು ಸಂಪ್ರದಾಯದಂತೆ ಸುಡಲಾಗದೆ, ಮಣ್ಣು ಮಾಡಲಾಗದೆ. ಜೆಸಿಬಿ ಮೂಲಕ ಗುಂಡಿ ತೋಡಿ ಅದಕ್ಕೆ ಒಂದಷ್ಟು ಹೆಣಗಳ ರಾಶಿ ಹಾಕಿ ಮಣ್ಣು ಮಾಡಿರುವ ದೃಶ್ಯವನ್ನು ಕಂಡಾಗಿದೆ. ಹಾಗಾಗಿ ಜಗತ್ತೇ ಎದುರಿಸುವ ಮಹಾಮಾರಿ ರೋಗವೆಂದರೆ ಕೊರೋನಾ ಎಂದು ಹೇಳಬಹುದು.
ಅಂದಹಾಗೆಯೇ, ಇಲ್ಲೊಂದು ಅಚ್ಚರಿಯ ವಿಚಾರವಿದೆ. ಅದೇನೆಂದರೆ ಜಗತ್ತಿನಲ್ಲಿ ಸಾವನ್ನು ನಿಷೇಧಿಸಿರುವ ದೇಶಗಳಿವೆ. ಈ ವಿಚಾರ ಅಚ್ಚರಿಯಾಗಿ ಕಂಡರು. ಇಂತಹದೊಂದು ನೀತಿ ಅನಿವಾರ್ಯ ಮತ್ತು ಆ ಸಮಯಕ್ಕೆ ನಿರ್ಧಾರ ಸರಿಯಾಗಿದೆ ಎಂಬಂತಿದೆ. ಮೊದಲೇ ಹೇಳಿದಂತೆ ಸಾವು ಯಾವಾಗ ಬೇಕಾದ್ರು ಬರಬಹುದು. ಹಾಗಂದ ಮಾತ್ರಕ್ಕೆ ಸಾವನ್ನೇ ನಿಷೇಧಿಸುವ ಕಾನೂನು ಹೊರಡಿಸುವುದು ಎಷ್ಟು ಸರಿ? ಎಂಬ ಪ್ರಶ್ನೆ ನಿಮ್ಮ ತಲೆ ಕೆಡಿಸಿರಬಹುದು. ಅದಕ್ಕೆ ಉತ್ತರವೆಂಬಂತೆ ಸಾವನ್ನು ನಿಷೇಧಿಸಿರುವ ಕೆಲವು ದೇಶಗಳು, ಅಲ್ಲಿನ ಪಟ್ಟಣಗಳು, ಅದಕ್ಕೆ ನಿಜವಾದ ಕಾರಣಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.