ಇಸ್ರೇಲ್: ಇರಾನ್ ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯಿಂದಾಗಿ ಅಲ್ಲಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನ ನಿಲ್ದಾಣದಲ್ಲಿ ಆತಂಕದಲ್ಲಿ ಕಳೆಯುವಂತಾಗಿದೆ.
ಇರಾನ್ ಕ್ಷಿಪಣಿ ದಾಳಿಯಿಂದಾಗಿ ಕೆಲವು ವಿಮಾನಗಳನ್ನು ತುರ್ತಾಗಿ ಲ್ಯಾಂಡಿಂಗ್ ಮಾಡಲಾಗಿದೆ. ಸ್ವಿಜರ್ ಲ್ಯಾಂಡ್ ನಿಂದ ದುಬೈ ಮಾರ್ಗವಾಗಿ ಭಾರತಕ್ಕೆ ಬರುತ್ತಿದ್ದ ಕನ್ನಡಿಗರು ಈಗ ತುರ್ತು ಲ್ಯಾಂಡಿಂಗ್ ನಿಂದಾಗಿ ಅತಂತ್ರರಾಗಿದ್ದಾರೆ. ಕನ್ನಡಿಗರು ಸೇರಿದಂತೆ ಭಾರತಕ್ಕೆ ಬರುತ್ತಿದ್ದ 300 ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಯುದ್ಧದ ವಾತಾವರಣದಿಂದಾಗಿ ಇರಾನ್, ಇರಾಕ್ ವಾಯುಸೀಮಾ ಪ್ರದೇಶ ಬಂದ್ ಮಾಡಲಾಗಿದೆ. ಹೀಗಾಗಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಭಾರತೀಯ ಪ್ರಯಾಣಿಕರು ವಿಮಾನದಲ್ಲೇ ಕಾಲ ಕಳೆಯುವಂತಾಗಿದೆ.
ಇನ್ನೊಂದೆಡೆ ಇಸ್ರೇಲ್ ಮೇಲೆ ಇರಾನ್ ದಾಳಿಯನ್ನು ಖಂಡಿಸಿರುವ ಅಮೆರಿಕಾ, ಬ್ರಿಟನ್ ರಾಷ್ಟ್ರಗಳು ದಾಳಿ ನಿಲ್ಲಿಸುವಂತೆ ಎಚ್ಚರಿಕೆ ನೀಡಿವೆ. ಇಸ್ರೇಲ್-ಇರಾನ್ ನಡುವಿನ ದಾಳಿಯನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವೈಟ್ ಹೌಸ್ ನಿಂದಲೇ ವೀಕ್ಷಣೆ ಮಾಡುತ್ತಿದ್ದು, ರಾಷ್ಟ್ರೀಯ ಭದ್ರತಾ ತಂಡದಿಂದ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.