ನವದೆಹಲಿ: ಅತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಯಾದವ್ ರನ್ನು ಗಲ್ಲಿಗೇರಿಸಲು ಪಾಕಿಸ್ತಾನ ತಯಾರಿ ನಡೆಸುತ್ತಿದ್ದರೆ, ಅತ್ತ ಭಾರತೀಯ ಮೀನುಗಾರರು, ಅದೇ ಪಾಕ್ ಅಧಿಕಾರಿಗಳ ಪ್ರಾಣ ಕಾಪಾಡಿದ್ದಾರೆ.
ಗುಜರಾತ್ ನ ಕರಾವಳಿ ತೀರದಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನದ ಕರಾವಳಿ ಭದ್ರತಾ ಪಡೆಯ ಐವರು ಅಧಿಕಾರಿಗಳ ಬೋಟ್ ಅಪಘಾತಕ್ಕೀಡಾಗಿತ್ತು. ಈ ಅಧಿಕಾರಿಗಳು, ಭಾರತೀಯ ಜಲಪ್ರದೇಶಕ್ಕೆ ಬಂದಿದ್ದರು.
ಇವರಲ್ಲಿ ಮೂವರು ಅಧಿಕಾರಿಗಳು ಸಾವನ್ನಪ್ಪಿದ್ದರೆ, ಇನ್ನಿಬ್ಬರನ್ನು ಭಾರತೀಯ ಮೀನುಗಾರು ರಕ್ಷಿಸಿದ್ದಾರೆ. ಭಾರತೀಯ ಮೀನುಗಾರರ ಈ ನಡೆಯನ್ನು ಮೆಚ್ಚಿ ಪಾಕ್ ಕರಾವಳಿ ಭದ್ರತಾ ಪಡೆ ತಮ್ಮ ವಶದಲ್ಲಿದ್ದ ಭಾರತದ 60 ಮೀನುಗಾರರು ಮತ್ತು ಅವರ ಏಳು ಬೋಟ್ ಗಳನ್ನು ಮರಳಿಸಿವೆ ಎಂದು ಮೀನುಗಾರರ ಹಿತರಕ್ಷಣಾ ವೇದಿಕೆ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ