ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಮತ್ತೊಮ್ಮೆ ಭಾರತೀಯನ ಮೇಲೆ ದಾಳಿಯಾಗಿದೆ. ಎರಡು ವರ್ಷದ ಹಿಂದೆ ಭಾರತೀಯರ ಮೇಲೆ ಸತತವಾಗಿ ಜನಾಂಗೀಯ ದಾಳಿಯಾಗಿತ್ತು. ಇದೀಗ ಮತ್ತೊಮ್ಮೆ ನೀನು ಯಾವ ದೇಶದವನೆಂದು ಕೇಳಿದ ದುಷ್ಕರ್ಮಿ ಭಾರತೀಯರೊಬ್ಬರ ಮೇಲೆ ದಾಳಿ ನಡೆಸಿದ್ದಾನೆ.
ಅದೂ ದಾಳಿ ನಡೆಸಿದಾತ 72 ವರ್ಷದ ಮುದುಕ! ಭಾರತೀಯ ಮೂಲದ ಕ್ಯಾಥೋಲಿಕ್ ಚರ್ಚ್ ಧರ್ಮ ಗುರುವಿನ ಮೇಲೆ ಇರಿದು ಗಾಯಗೊಳಿಸಲಾಗಿದೆ. ಜನಾಂಗೀಯ ಧ್ವೇಷವೇ ಇದಕ್ಕೆ ಕಾರಣವಿರಬಹುದೆಂದು ಊಹಿಸಲಾಗಿದೆ.
ತಾನು ಭಾರತೀಯ ಎಂದಿದ್ದಕ್ಕೆ ಹಿಂದೂ ಅಥವಾ ಮುಸ್ಲಿಂ ಆಗಿರಬಹುದೆಂದುಕೊಂಡು ದುಷ್ಕರ್ಮಿ ದಾಳಿ ನಡೆಸಿರಬಹುದು ಎನ್ನಲಾಗಿದೆ. ಆದರೆ ದಾಳಿಗೊಳಗಾದ ವ್ಯಕ್ತಿ ತಾನು ಚರ್ಚ್ ನ ಧರ್ಮಗುರು, ಸಾಮೂಹಿಕ ಪ್ರಾರ್ಥನೆಗೆ ತೆರಳುತ್ತಿದ್ದೇನೆಂದರೂ, ಕೇಳದೇ ದಾಳಿ ಮಾಡಿದ್ದಾನೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ