ನವದೆಹಲಿ: ಗಲ್ವಾನ್ ಘರ್ಷಣೆಯಾಗಿ ಎರಡು ತಿಂಗಳು ಕಳೆದಿಲ್ಲ. ಆಗಲೇ ಚೀನಾ ಮತ್ತೊಮ್ಮೆ ಗಡಿಯಲ್ಲಿ ಕಿರಿಕ್ ಮಾಡಿದೆ. ಪ್ಯಾಂಗಾಂಗ್ ವಲಯದಲ್ಲಿ ಗಡಿ ಅತಿಕ್ರಮಿಸಲು ಬಂದ ಚೀನಾ ಸೇನೆಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ.
ಮೊನ್ನೆ ರಾತ್ರಿ ವೇಳೆಗೆ ಚೀನಾ ಸೈನಿಕರು ಪ್ಯಾಂಗಾಂಗ್ ವಲಯದಲ್ಲಿ ಅತಿಕ್ರಮಣಕ್ಕೆ ಯತ್ನಿಸಿದ್ದರು. ರಾತ್ರಿ ವೇಳೆ ಬೆಟ್ಟಗಳ ಅತಿಕ್ರಮಣಕ್ಕೆ ಮುಂದಾದ ಚೀನಾ ಸೈನಿಕರನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ ಎಂದು ಸೇನಾ ಮೂಲಗಳು ಹೇಳಿವೆ.
ಗಲ್ವಾನ್ ಘರ್ಷಣೆ ಬಳಿಕ ಚೀನಾದಿಂದ ಎದುರಾಗುವ ಯಾವುದೇ ಅಪಾಯ ತಡೆಗಟ್ಟಲು ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ. ಇದೀಗ ಮತ್ತೆ ಅತಿಕ್ರಮಣ ಮಾಡಲು ಮುಂದಾದ ಬಳಿಕ ಭಾರತೀಯ ಸೇನೆ ಹೈ ಅಲರ್ಟ್ ಘೋಷಿಸಿದೆ.