ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರದ ಪ್ರಕರಣದ ಹಿನ್ನೆಲೆ ಬಂಧಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
ಖಾನ್ ಬೆಂಬಲಿಗರು ಅವರ ಬಂಧನವನ್ನು ವಿರೋಧಿಸಿ ಭಾರೀ ಪ್ರತಿಭಟನೆ ನಡೆಸಿರುವ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ವಾಪಾಸಾಗಿದ್ದಾರೆ. ಮಾತ್ರವಲ್ಲದೇ ಪಿಟಿಐ ಅಧ್ಯಕ್ಷನನ್ನು ಗುರುವಾರ ಬೆಳಗ್ಗೆ 10 ಗಂಟೆಯವರೆಗೂ ಬಂಧಿಸದಂತೆ ಲಾಹೋರ್ ಹೈಕೋರ್ಟ್ ಆದೇಶಿಸಿದೆ.
ಇಮ್ರಾನ್ ಖಾನ್ನ ನೂರಾರು ಬೆಂಬಲಿಗರು ಅವರ ಬಂಧನವನ್ನು ವಿರೋಧಿಸಿ ನಿವಾಸದ ಬಳಿಯಲ್ಲಿ ಘರ್ಷಣೆ ನಡೆಸಿದ್ದಾರೆ. ಅಧಿಕಾರಿಗಳು ಇಮ್ರಾನ್ ಖಾನ್ ಬಂಧನವನ್ನು ಹಿಂತೆಗೆದುಕೊಳ್ಳುತ್ತಿದ್ದಂತೆಯೇ ಮಾಜಿ ಪಿಎಂ ಗ್ಯಾಸ್ ಮಾಸ್ಕ್ ಧರಿಸಿ ಮನೆಯಿಂದ ಹೊರಬಂದಿದ್ದಾರೆ.
ಗ್ಯಾಸ್ ಮಾಸ್ಕ್ ಧರಿಸಿ ಖಾನ್ ತಮ್ಮ ಬೆಂಬಲಿಗರೊಂದಿಗೆ ಮಾತನಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.