ರಷ್ಯಾವು ಉಕ್ರೇನ್ನ ರಾಜಧಾನಿಯನ್ನು ವಶಪಡಿಕೊಳ್ಳಲು ಪ್ರಯತ್ನಿಸುತ್ತಿರವ ಹಿನ್ನೆಲೆಯಲ್ಲಿ ಕೀವ್ನ ಉತ್ತರ ಭಾಗದಲ್ಲಿ ಭಾರೀ ಸಂಘರ್ಷ ಏರ್ಪಟ್ಟಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಈಶಾನ್ಯದಿಂದ ವಾಯುವ್ಯದತ್ತ ರಷ್ಯಾಪಡೆಗಳು ಮುನ್ನುಗುತ್ತಿದ್ದು ಇದಕ್ಕೆ ಉಕ್ರೇನ್ ಸೈನಿಕರು ತೀವ್ರ ಪ್ರತಿರೋಧ ಒಡ್ಡಿ ಅವರನ್ನು ಹಿಂದಕ್ಕೆ ಕಳಿಸಲಾಗಿದೆ. ಪ್ರಸ್ತುತ ಕೀವ್ನಿಂದ ರಷ್ಯಾ ಪಡೆಗಳು 25ಕಿ.ಮೀ ದೂರದಲ್ಲಿ ಮುಂದಿನ ದಿನಗಳಲ್ಲಿ ರಾಜಧಾನಿಯನ್ನು ಸುತ್ತುವರೆಯುವ ಸಾಧ್ಯತೆ ಇದೆ ಬ್ರಿಟನ್ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ನ ಸುಮಿ ನಗರದಲ್ಲಿರುವ ರಾಸಾಯನಿಕ ಸ್ಥಾವರದಲ್ಲಿ ಅಮೋನಿಯಾ ಸೋರಿಕೆಯಾಗಿದ್ದು ಸುಮಾರು 2.5 ಕಿ.ಮೀ ಪ್ರದೇಶ ಕಲುಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಸೋರಿಕೆಗೆ ಕಾರಣ ಏನು ಎಂದು ಈವರೆಗೂ ತಿಳಿದುಬಂದಿಲ್ಲ.
ಸುಮಿಖಿಮೋಪ್ರೋಂ ಸ್ಥಾವರವು ನಗರದಿಂದ ಹೊರ ವಲಯದಲ್ಲಿದ್ದು ನಗರದ ಜನಸಂಖ್ಯೆ ಸುಮಾರು 2,63,000 ದಷ್ಟಿದೆ. ಕಳೆದ ಕೆಲವು ದಿನಗಳಿಂದ ರಷ್ಯಾ ಈ ಪ್ರದೇಶದ ಮೇಲ್ ಶೆಲ್ದಾಳಿ ಕೂಡ ನಡೆಸುತ್ತಿದೆ. ಈ ದಾಳಿಯಿಂದಲೇ ರಾಸಾಯನಿಕ ಸೋರಿಕೆಯಾಗಿರುವ ಶಂಕೆ ಇದೆ.