Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಲಿಕಾಪ್ಟರ್ ಇಳಿಸಿ ಅಡ್ರಸ್ ಕೇಳಿದ ಪೈಲಟ್

ಹೆಲಿಕಾಪ್ಟರ್ ಇಳಿಸಿ ಅಡ್ರಸ್ ಕೇಳಿದ ಪೈಲಟ್
New Delhi , ಶನಿವಾರ, 18 ಫೆಬ್ರವರಿ 2017 (12:56 IST)
ವಿಮಾನ ಮತ್ತು ಹೆಲಿಕಾಪ್ಟರ್‌ಗಲೂ ಮೊದಲೇ ತಮ್ಮ ನಿರ್ದೇಶಿತ ಗುರಿಯನ್ನು ನಿರ್ಧರಿಸಿಕೊಂಡು
ಏರ್ ಟ್ರಾಫಿಕ್ ಕಂಟ್ರೋಲ್ ಮಂಡಳಿಯೊಂದಿಗೆ ಸಂಪರ್ಕದಲ್ಲಿಟ್ಟುಕೊಂಡು ಪಯಣಿಸುತ್ತವೆ. ಏನಾದರೂ ಊಹಿಸದ ಗಂಡಾಂತರ ಎದುರಾದರೆ ಮಾತ್ರ ಹತ್ತಿರದಲ್ಲಿರುವ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತವೆ.
 
ಆದರೆ ಪೈಲಟ್ ಒಬ್ಬ ತಾನು ಯಾವ ಕಡೆ ಹೊರಟಿದ್ದೇನೆ ಎಂದು ತಿಳಿಯದೆ..ರಾಷ್ಟ್ರೀಯ ಹೆದ್ದಾರಿ ಮೇಲೆ ಹೆಲಿಕಾಪ್ಟರನ್ನು ಇಳಿಸಿದ್ದಾನೆ. ಈ ಘಟನೆ ಕಜಕಿಸ್ತಾನದಲ್ಲಿ ನಡೆದಿದೆ. ಕಜಕಿಸ್ತಾನದ ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಸಾಲಾಗಿ ಲಾರಿಗಳು ಪ್ರಯಣಿಸುತ್ತಿವೆ. ಸುತ್ತಲೂ ಮಂಜು ಸುರಿಯುತ್ತಿದೆ. ಹೆದ್ದಾರಿ ಬಿಟ್ಟು ಬೇರೇನು ಕಾಣುತ್ತಿಲ್ಲ. ಆ ಮಂಜಿನ ಸೆರಗಿನಿಂದ ಒಮ್ಮೆಲೆ ಕಜಕಿಸ್ತಾನ ಸೈನ್ಯದ ಎಂಐ 80 ಹೆಲಿಕಾಪ್ಟರ್ ಲಾರಿಗಳ ಮುಂದೆ..ನಡು ರಸ್ತೆಯಲ್ಲಿ ಲ್ಯಾಂಡ್ ಆಗಿದೆ.
 
ಏನು ನಡೆಯುತ್ತಿದೆ ಎಂಬುದು ಲಾರಿ ಡ್ರೈವರ್‌ಗಳಿಗೆ ಅರ್ಥವಾಗಲಿಲ್ಲ. ಆ ಹೆಲಿಕಾಪ್ಟರ್‌ನಿಂದ ಪೈಲಟ್ ಕೆಳಗೆ ಇಳಿದು ಮುಂದೆ ನಿಂತಿದ್ದ ಲಾರಿ ಡ್ರೈವರ್ ಬಳಿ ಬಂದು ಹಸ್ತಲಾಘವ ಮಾಡಿದ. ಅಕ್ತುಬಿನ್ಸಿಕ್ ನಗರಕ್ಕೆ ಹೇಲೆ ಹೋಗುವುದೆಂದು ಕೇಳಿದ. ಲಾರಿ ಡ್ರೈವರ್ ಸೂಚನೆ ಮೇರೆಗೆ ಹೊರಟುಹೋದ.
 
ಈ ವಿಚಿತ್ರ ಘಟನೆಗೆ ಲಾರಿ ಡ್ರೈವರ್‌ಗಳು ಸುಸ್ತಾಗಿದ್ದರು. ಕಾರಿನಲ್ಲಿ ಹೋಗುವವರು ಅಡ್ರೆಸ್ ಕೇಳಿದಂತೆ ಅಷ್ಟು ದೊಡ್ಡ ಹೆಲಿಕಾಪ್ಟರನ್ನು ನಡುರಸ್ತೆಯಲ್ಲಿ ಇಳಿಸಿ ವಿಳಾಸ ಕೇಳುವುದೆಂದರೇನು? ಆ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಆ ದೇಶದ ರಕ್ಷಣಾ ಇಲಾಖೆ ಶಿಕ್ಷಣದ ಭಾಗವಾಗಿ ಪೈಲಟ್‌ಗಳಿಗೆ ಅವರ ನಿರ್ದೇಶಿತ ಪ್ರದೇಶ ತಿಳಿಸಿರಲಿಲ್ಲ. ಹೋದ ಸ್ಥಳವನ್ನು ತಿಳಿದುಕೊಳ್ಳಲು ಅವರನ್ನು ಕಳುಹಿಸಿದ್ದೆವೆಂದು ವಿವರಣೆ ನೀಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆನ್‍ಲೈನ್‍ನಲ್ಲಿ ಅಪರಿಚಿತರ ಗೆಳೆತನ ಬೆಳೆಸುವಾಗ ಇರಲಿ ಎಚ್ಚರ