ನೀವು ಇಷ್ಟ ಪಡೋ ಹುಡುಗ ತಾನಾಗಿಯೇ ಬಂದು ಪ್ರಪೋಸ್ ಮಾಡಿದರೆ ಏನು ಮಾಡುತ್ತೀರಾ? ಖುಷಿಯಿಂದ ಕುಣಿದು ಬಿಡುತ್ತೀರಾ. ಅವನನ್ನು ತಬ್ಬಿ ಬಿಕ್ಕಳಿಸುತ್ತೀರಾ ಅಥವಾ ನಾಚುತ್ತ ಅವನ ನಿವೇದನೆಯನ್ನು ಸ್ವೀಕರಿಸುತ್ತೀರಾ?
ಆದರೆ ಮೆಕ್ಸಿಕೋದ ಹುಡುಗಿಯೋರ್ವಳು ತನ್ನ ಗೆಳೆಯ ಪ್ರೇಮ ನಿವೇದನೆ ಮಾಡಿದಾಗ ಆಕೆ ತಲೆ ತಿರುಗಿ ಬಿದ್ದಿದ್ದಾಳೆ. ಅದೇಕೆ ಅಂತೀರಾ ? ಮುಂದೆ ಓದಿ.
ಮೆಕ್ಸಿಕೋ ಮೂಲದ ಮಾಡೆಲ್ ರೆಯ್ನಾ ರೆಂಟೀರಿಯಾ ಮತ್ತು ಆಕೆಯ ಗೆಳೆಯ ಬೆನಿಟೆಸ್ ಹಲವು ದಿನಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಪರಷ್ಪರ ಹೇಳಿಕೊಂಡಿರಲಿಲ್ಲ. ಆಕೆಗೆ ತನ್ನ ಪ್ರೀತಿ ವಿಷಯವನ್ನು ಹೇಳಲು ನಿಶ್ಚಯಿಸಿದ ಬೆನಿಟಿನ್ ಇತ್ತೀಚಿಗೆ ವಾದ್ಯ ಸಂಗೀತದೊಂದಿಗೆ ಬಂದು ಉಂಗುರವಿದ್ದ ಕಪ್ಪು ಬಾಕ್ಸ್ ಹಿಡಿದು ಆಕೆಗೆ ಪ್ರಪೋಸ್ ಮಾಡಿಯೇ ಬಿಟ್ಟ. ತಕ್ಷಣ ರೆಯ್ನಾ ತಲೆ ತಿರುಗಿ ಬಿದ್ದಳು.
ಗಾಬರಿಗೆ ಬಿದ್ದ ಆಕೆಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಆತ ಪ್ರೇಮ ನಿವೇದನೆ ಮಾಡಿದ್ದು ನನ್ನಿಂದ ನಂಬಲಾಗಲಿಲ್ಲ. ಹೇಳತೀರದ ಸಂತೋಷ ಶಾಕ್ ರೂಪದಲ್ಲಿ ಬಂತು ಹೀಗಾಗಿ ನಾನು ಪ್ರಜ್ಞಾಹೀನಳಾದೆ. ನಾನೀಗ ತುಂಬ ಖುಷಿಯಾಗಿದ್ದೇನೆ ಎನ್ನುತ್ತಾಳೆ ಬೆಡಗಿ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ಮದುವೆಯಾಗ್ತೀಯಾ ಕೇಳಿದ್ದಕ್ಕೆ ತಲೆ ತಿರುಗಿ ಬಿದ್ದಳು,ಅದ್ಯಾಕೆ? ( ವಿಡಿಯೋ)