Webdunia - Bharat's app for daily news and videos

Install App

ರಷ್ಯಾ ರಾಯಭಾರಿಯ ಲೈವ್ ಹತ್ಯೆ (ವಿಡಿಯೋ)

Webdunia
ಮಂಗಳವಾರ, 20 ಡಿಸೆಂಬರ್ 2016 (09:39 IST)
ಟರ್ಕಿಯಲ್ಲಿ ರಷ್ಯಾ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಆ್ಯಂಡ್ರ್ಯೂ ಕಾರ್ಲೋ ಅವರನ್ನು ಅಂಕಾರಾದಲ್ಲಿ ಸೋಮವಾರ ಸಂಜೆ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಈ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು ಆರೋಪಿಯನ್ನು ಸಹ ಪೊಲೀಸರು ಹತ್ಯೆ ಮಾಡಿದ್ದಾರೆ.

ಕಲಾ ಗ್ಯಾಲರಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಈ ದಾಳಿ ನಡೆದಿದ್ದು ಗಂಭೀರವಾಗಿ ಗಾಯಕೊಂಡ ಕಾರ್ಲೋ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತೆ ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಆರೋಪಿ ಪೊಲೀಸ್ ಅಧಿಕಾರಿಯಾಗಿದ್ದು ಆ ಸಮಯದಲ್ಲಿ ಕರ್ತವ್ಯದ ಮೇಲಿರಲಲ್ಲಿ, ಎಂದು ಹೇಳಲಾಗುತ್ತಿದೆ. ಶೂಟ್ ಧರಿಸಿದ್ದ ಆತ ಏಕಾಏಕಿ ಒಳ ನುಗ್ಗಿ ರಾಯಭಾರಿ ಅಧಿಕಾರಿ ಬಳಿ ಬಂದು,  " ಅಲ್ಲಾಹೋ ಅಕ್ಬರ್"  ಎನ್ನುತ್ತ ಕನಿಷ್ಠ 8 ಬಾರಿ ಗುಂಡು ಹಾರಿಸಿದ್ದಾನೆ. ಬಳಿಕ ''ಅಲೆಪ್ಪೊ ಮರೆಯಬೇಡಿ, ಸಿರಿಯಾ ಮರೆಯಬೇಡಿ. ನಮ್ಮ ನಗರಗಳು ಭದ್ರವಾಗಿರುವುವರೆಗೆ ನೀವು ಭದ್ರತೆಯನ್ನು ಅನುಭವಿಸುವ ಹಾಗಿಲ್ಲ. ಸಾವೊಂದು ನನ್ನನ್ನು ಇಲ್ಲಿಂದ ಕರೆದೊಯ್ಯಬಹುದು. ಆದರೆ ಸಂಕಷ್ಟವನ್ನು ಅನುಭವಿಸುತ್ತಿರುವವರೆಲ್ಲರೂ ಇದರ ಬೆಲೆಯನ್ನು ತೆರಲಿದ್ದಾರೆ", ಎಂದು ಕೂಗಿದ್ದಾನೆ. 
 
ಸಿರಿಯಾ ಆಂತರಿಕ ಕಲಹವೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದ್ದು. ಸಿರಿಯನ್ ಸಿವಿಲಿಯನ್ ವಾರ್‌ನಲ್ಲಿ ರಷ್ಯಾ ಸೈನ್ಯ ಕೂಡ ಭಾಗಿಯಾಗಿರುವ ಪ್ರತೀಕಾರವಾಗಿ ಈ ದಾಳಿ ನಡೆದಿರಬಹುದು ಎಂದು ಊಹಿಸಲಾಗಿದೆ. 
ಇಲ್ಲಿಯವರೆಗೆ ಘಟನೆಯ ಹೊಣೆಯನ್ನು ಯಾವ ಸಂಘಟನೆ ಕೂಡ ಹೊತ್ತುಕೊಂಡಿಲ್ಲ. ಹೀಗಾಗಿ ಘಟನೆಯ ಹಿಂದಿನ ನಿಜವಾದ ಉದ್ದೇಶ ತನಿಖೆಯ ಬಳಿಕವಷ್ಟೇ ತಿಳಿದು ಬರಲಿದೆ. ಇದು ಭಯೋತ್ಪಾದಕ ಕೃತ್ಯ ಎಂದುಕೊಂಡಿದ್ದೇವೆ. ಆದರೆ ಉಗ್ರರ ವಿರುದ್ಧದ ನಡೆಯನ್ನು ನಾವು ಹಿಂತೆದುಕೊಳ್ಳುವುದಿಲ್ಲ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಝಖರೋವಾ ತಿಳಿಸಿದ್ದಾರೆ.

ರಷ್ಯಾ ರಾಯಭಾರಿಯ ಲೈವ್ ಹತ್ಯೆ (ವಿಡಿಯೋ)

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments