ವಾಷಿಂಗ್ಟನ್: ತಾಲಿಬಾನ್ ವಿಚಾರದಲ್ಲಿ ಜಿ-7 ರಾಷ್ಟ್ರಗಳು ಒಗ್ಗಟ್ಟಾಗಿದ್ದು, ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ನೆಲೆಯಾಗದಂತೆ ತಡೆಯಲು ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಜಿ-7, ವಿಶ್ವಸಂಸ್ಥೆ, ನ್ಯಾಟೋ ಮತ್ತು ಯುರೋಪಿಯನ್ ಯೂನಿಯನ್ ಮುಖಂಡರುಗಳ ಜೊತೆಗೆ ಮಂಗಳವಾರ ನಡೆದ ವರ್ಚುಯಲ್ ಸಭೆಯ ಬಳಿಕ ಬೈಡನ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಜಿ-7 ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಇಂಗ್ಲೆಂಡ್ ನೊಳ್ಳಗೊಂಡ ಅಂತರ್ ಸರ್ಕಾರಿ ರಾಜಕೀಯ ವೇದಿಕೆಯಾಗಿದೆ. ತಾಲಿಬಾನ್ ವಿಚಾರದಲ್ಲಿ ಒಗ್ಗಟ್ಟಿನಿಂದ ನಿಲ್ಲುವುದಾಗಿ ಜಿ-7, ಯುರೋಪಿಯನ್ ಯೂನಿಯನ್, ನ್ಯಾಟೋ ಮತ್ತು ವಿಶ್ವಸಂಸ್ಥೆಯ ನಾಯಕರು ಒಪ್ಪಿಕೊಂಡಿರುವುದಾಗಿ ಶ್ವೇತಭವನದಲ್ಲಿ ಬೈಡನ್ ತಿಳಿಸಿದರು.
ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ಮೂಲ ನೆಲೆಯಾಗದಂತೆ ತಡೆಗಟ್ಟುವುದು ಸೇರಿದಂತೆ ಅಫ್ಘಾನಿಸ್ತಾದಲ್ಲಿ ಯಾವುದೇ ಭವಿಷ್ಯದ ಸರ್ಕಾರದ ನ್ಯಾಯಸಮ್ಮತತೆಯು ಅಂತರಾಷ್ಟ್ರೀಯ ಬಾಧ್ಯತೆಗಳನ್ನು ಎತ್ತಿಹಿಡಿಯಲು ಈಗ (ತಾಲಿಬಾನ್) ತೆಗೆದುಕೊಳ್ಳುವ ವಿಧಾನವನ್ನು ಅವಲಂಬಿಸಿದೆ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ, ಜಿ-7 ದೇಶಗಳು ತಮ್ಮಲ್ಲಿ ಯಾರೂ ತಾಲಿಬಾನ್ ಮಾತನ್ನು ತೆಗೆದುಕೊಳ್ಳುವುದಿಲ್ಲ ಎಂದು ಒಪ್ಪಿಕೊಂಡಿವೆ ಎಂದು ಬೈಡನ್ ಹೇಳಿದರು.
ತಾಲಿಬಾನ್ ಕ್ರಮಗಳಿಂದ ನಾವು ನಿರ್ಣಯಿಸುತ್ತೇವೆ, ತಾಲಿಬಾನ್ ನಡವಳಿಕೆಗೆ ಯಾವುದೇ ಕ್ರಮ ಕೈಗೊಳ್ಳಬೇಕಾದರೂ ನಾವು ನಿಕಟ ಸಹಕಾರದಿಂದ ಇರುತ್ತೇವೆ, ಇದೇ ವೇಳೆ ಆಫ್ಘನ್ ಜನರಿಗೆ ಮಾನವೀಯ ಬದ್ಧತೆಯನ್ನು ನಾವು ನವೀಕರಿಸಿದ್ದು, ಅಫ್ಘಾನಿಸ್ತಾನದಲ್ಲಿ ಅನಿಯಮಿತ ಮಾನವೀಯ ಪ್ರವೇಶದೊಂದಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರ ಪ್ರಸ್ತಾವನೆಯನ್ನು ಬೆಂಬಲಿಸಿದ್ದೇವೆ ಎಂದು ಬಿಡೆನ್ ಹೇಳಿದರು.