ನೆರೆಯ ಕಪಟಿ ಚೀನಾ ಕೊನೆಗೂ ಭಾರತದ ವಿರುದ್ಧ ಮುಗಿಬೀಳುವ ಸೂಚನೆ ಕೊಟ್ಟಿದೆ. ಚೀನಾದ ಮಾಜಿ ರಾಜತಾಂತ್ರಿಕ ಅಧಿಕಾರಿ ಲಿಯೂ ಊಫಾ ಭಾರತವನ್ನ ಬೆದರಿಸುವ ಪ್ರಯತ್ನ ನಡೆಸಿದ್ದಾರೆ.
ಭಾರತ ಸೇನೆ ದೊಕ್ಲಾಮ್ ಪ್ರವೇಶಿಸಿತಿಂಗಳು ಕಳೆದಿದೆ. ಭಾರತ ಸೇನೆಗೆ 3 ಆಯ್ಕೆಗಳಿವೆ. ಭಾರತ ಸೇನೆಯನ್ನ ಹಿಂಪಡೆಯಬೇಕು, ಇಲ್ಲವೆ ಚೀನಾ ಅವರನ್ನ ಸೆರೆ ಹಿಡಿಯುತ್ತೆ ಅಥವಾ ಕೊಂದು ಹಾಕುತ್ತೆ. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತೆ ಎಂದು ಉದ್ಧಟತನದ ಮಾತುಗಳನ್ನಾಡಿದ್ದಾರೆ. ಭಾರತ ಪ್ರಜ್ಞಾಪೂರ್ವಕ ಾಯ್ಕೆ ಮಾಡಲೆಂದು ಚೀನಾ ಕಾಯುತ್ತಿದೆ.
ಪೂರ್ವ ನಿಯಮದಂತೆ ಭಾರತ ಸೇನೆ ಹಿಂಪಡೆಯುವವರೆಗೂ ರಾಜತಾಂತ್ರಿಕ ಮಾತುಕತೆ ಇಲ್ಲ ಎನ್ನುತ್ತಿರುವ ಡ್ರ್ಯಾಗನ್`ಗಳು ಮತ್ತೊಂದೆಡೆ ಭಾರತವನ್ನ ಬೆದರಿಸುವ ತಂತ್ರ ಮಾಡುತ್ತಿವೆ. ಈ ಮಧ್ಯೆ, ಭೂತಾನ್`ಗೆ ಯುದ್ಧ ಸಾಮಾಗ್ರಿಗಳನ್ನ ಸಾಗಿಸಿರುವ ಚೀನಾ ಗಡಿಯಲ್ಲಿ ಸೇನಾಪಡೆಗಳನ್ನ ಸಂಖ್ಯೆ ಹೆಚ್ಚಿಸುವ ಮೂಲಕ ಯುದ್ಧೋನ್ಮಾದದಿಂದ ಕುದಿಯುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ