ಈ ಹಿಂದಿನ ಅಷ್ಘಾನಿಸ್ತಾನ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸೈಯದ್ ಅಹಮ್ಮದ್ ಶಾ ಸಾದತ್ ಈಗ ಜರ್ಮನಿಯ ಲೇಪ್ಜಿಗ್ ನಗರದಲ್ಲಿ ಪಿಜ್ಜಾ ಡೆಲಿವರಿ ಹುಡುಗನಾಗಿ ಕೆಲಸ ಮಾಡುತ್ತಿದ್ದಾರೆ.
ಸ್ಥಳೀಯ ಪತ್ರಕರ್ತನೊಬ್ಬ ತೆಗೆದಿರುವ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ ಡಿಗ್ರಿ ಮಾಡಿರುವ ಸಾದತ್,
ಸೈಯದ್ ಅಶ್ರಫ್ ಘನಿ ನೇತೃತ್ವದ ಸರ್ಕಾರದಲ್ಲಿ ಸಂವಹನ ಮತ್ತು ತಂತ್ರಜ್ಞಾನ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2018ರಲ್ಲಿ ಸಂಪುಟ ಸೇರಿದವರು 2020ರಲ್ಲಿ ರಾಜೀನಾಮೆ ನೀಡಿ ಜರ್ಮನಿಗೆ ಹೋಗಿ ನೆಲೆಸಿದ್ದರು.
ಈಗ ಜರ್ಮನಿಯ ಲೇಪ್ಜಿಗ್ನಲ್ಲಿ ಪಿಜ್ಜಾ ಡೆಲಿವರಿ ಹುಡುಗನಾಗಿ ಕೆಲಸ ಮಾಡುತ್ತಿದ್ದಾರೆ. ಈ ಪೋಟೋಗಳನ್ನು ಅಲ್ ಜಜೀರಾ ಟೀವಿ ಟ್ವೀಟ್ ಮಾಡಿದೆ.