Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅತೀ ದೊಡ್ಡ ಇಂಗ್ಲೆಂಡ್‍ ನಗರಕ್ಕೆ ಆರ್ಥಿಕ ಸಂಕಷ್ಟ

ಅತೀ ದೊಡ್ಡ ಇಂಗ್ಲೆಂಡ್‍ ನಗರಕ್ಕೆ ಆರ್ಥಿಕ ಸಂಕಷ್ಟ
ಲಂಡನ್ , ಬುಧವಾರ, 6 ಸೆಪ್ಟಂಬರ್ 2023 (08:38 IST)
ಲಂಡನ್ : ಇಂಗ್ಲೆಂಡ್ನ ಎರಡನೇ ಅತಿ ದೊಡ್ಡ ನಗರ ಬರ್ಮಿಂಗ್ಹ್ಯಾಮ್ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿಕೊಂಡಿದೆ. 1988ರ ಸ್ಥಳೀಯ ಸರ್ಕಾರದ ಹಣಕಾಸು ಕಾಯಿದೆ ಅಡಿಯಲ್ಲಿ ಸೆಕ್ಷನ್ 114 ಸೂಚನೆಯನ್ನು ನೀಡಲಾಗಿದೆ. ಇದು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ವೆಚ್ಚವನ್ನು ನಿರ್ಬಂಧಿಸುತ್ತದೆ.

ಅಲ್ಲಿನ ಸ್ಥಳೀಯ ಆಡಳಿತ ತನ್ನ ಬಜೆಟ್ ಸಮತೋಲನಗೊಳಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದೆ. ಈ ಮೂಲಕ ಸರ್ಕಾರವನ್ನು ದೂಷಿಸಿದೆ. 2010 ರಿಂದ ಸರ್ಕಾರಗಳ ನೀತಿಯಿಂದ ಈ ಸಮಸ್ಯೆ ಎದುರಾಗಿದೆ. ಬಜೆಟ್ನಲ್ಲಿ 1.25 ಶತಕೋಟಿ ಡಾಲರ್ ಕಡಿತಗೊಳಿಸಿರುವುದು ಇಂದಿನ ಸಮಸ್ಯೆಗೆ ಮೂಲ ಕಾರಣ ಎಂದು ಸ್ಥಳೀಯ ಆಡಳಿತ ಹೇಳಿಕೊಂಡಿದೆ. 

ಜನರ ಆದಾಯ ಹಾಗೂ ವೆಚ್ಚಗಳಿಗೆ ಸರಿ ಹೊಂದಿಕೆ ಆಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಗತ್ಯ ಸೇವೆಗಳ ವೆಚ್ಚವು ಭಾರೀ ದುಬಾರಿಯಾಗಿದೆ.

ಇದು ಆರ್ಥಿಕ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಸರಿಯಾದ ಕ್ರಮವಾಗಿದೆ ಎಂದು ಕಾರ್ಮಿಕ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ