ಚೀನಾದಲ್ಲಿ ಸೋಮವಾರ ನಡೆದ ಭೀಕರ ಬಹುಮಹಡಿ ಕಟ್ಟಡ ದುರಂತದಲ್ಲಿ 3 ವರ್ಷದ ಮಗುವೊಂದು ಪವಾಡಸದೃಶವಾಗಿ ಬದುಕುಳಿದಿದ್ದು, ಘಟನೆ ನಡೆದ 15 ಗಂಟೆಗಳ ಬಳಿಕ ಅದನ್ನು ಜೀವಂತವಾಗಿ ರಕ್ಷಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಗೆ ಸಿಮೆಂಟ್ ಕಂಬದ ಅಡಿ ಒಬ್ಬ ವ್ಯಕ್ತಿಯ ಶವ ಸಿಕ್ಕಿತು. ಆತನನ್ನು ಹೊರ ತೆಗೆದಾಗ ಮಡಿಲಲ್ಲಿ ಮಗು ಜೀವಂತವಾಗಿ ಪತ್ತೆಯಾಗಿದೆ.
ಕಟ್ಟಡ ಕುಸಿದು ಬೀಳಲು ಆರಂಭವಾಗುತ್ತಿದ್ದಂತೆ ಪುಟ್ಟ ಮಗು 'ವು ನಿಂಗ್ಸಿ' ತಂದೆ ಮಗಳನ್ನು ಅಪ್ಪಿ ಹಿಡಿದು ಅವಶೇಷಗಳು ಆಕೆಯ ಮೇಲೆ ಬೀಳದಂತೆ ತಡೆದಿದ್ದಾನೆ. ಅದೇ ಅವಶೇಷಗಳಡಿ ಸಿಕ್ಕಿ ಮರಣವನ್ನಪ್ಪಿದ್ದಾನೆ.
ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದು ಆರೋಗ್ಯವಾಗಿದ್ದು ಎಲ್ಲರನ್ನು ನಿಬ್ಬೆರಗಾಗಿಸಿದೆ. ಸಾವಿನಲ್ಲೂ ತಂದೆ ಮಗುವನ್ನು ಅಪ್ಪಿ ಹಿಡಿದ ದೃಶ್ಯ ಎಂತಹ ಕಲ್ಲು ಹೃದಯವನ್ನು ಸಹ ಕರಗಿಸುವಂತಿತ್ತು.
ದುರದೃಷ್ಟವಶಾತ್ ಮಗುವಿನ ತಂದೆ-ತಾಯಿ ಸೇರಿದಂತೆ ಸಂಪೂರ್ಣ ಕುಟುಂಬ ದುರ್ಮರವನ್ನಪ್ಪಿದೆ. ಆದರೆ ಪುಟ್ಟ ಮಗು ಮಾತ್ರ ಜೀವಂತವಾಗಿ ಸಿಕ್ಕಿದೆ. ಮೃತ ತಂದೆ ಷೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಪೂರ್ವ ಚೀನಾದ ವೆಂಗ್ ಜೂನಲ್ಲಿ ಸೋಮವಾರ ಕಟ್ಟಡವೊಂದು ಕುಸಿದು ಒಟ್ಟು 22 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಗು ಸೇರಿದಂತೆ 6 ಮಂದಿಯನ್ನು ರಕ್ಷಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ