ಕರ್ತಾಪುರ : ಭಾರತದ ಜೊತೆ ಯಾವಾಗಲೂ ಶತ್ರುತ್ವ ಸಾಧಿಸುತ್ತಿದ್ದ ಪಾಕಿಸ್ತಾನ ಇದೀಗ ಭಾರತದ ಜೊತೆ ಮಿತ್ರತ್ವ ಹೊಂದಲು ಆಶಿಸುತ್ತಿದೆ.
ಕರ್ತಾಪುರ್ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು,’ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಮತ್ತು ಕಾಶ್ಮೀರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲೇ ಪಾಕಿಸ್ತಾನ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಅಲ್ಲದೇ ಭಾರತದೊಂದಿಗೆ ನಾಗರಿಕ ಸಂಬಂಧವನ್ನು ಹೊಂದುವ ಆಶಯ ವ್ಯಕ್ತಪಡಿಸಿದ ಅವರು, ಕಾಶ್ಮೀರ ವಿಚಾರದಲ್ಲಿ ನೆರೆಯ ದೇಶಗಳು ಸುಮ್ಮನೆ ಇರಲು ಸಾಧ್ಯವಿಲ್ಲ, ಯುದ್ಧವೆಂದು ಹೊರಟರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ, ಹಾಗಾಗಿ ಒಟ್ಟಾಗಿ ಕೆಲಸ ಮಾಡಬೇಕಿದೆ. ಜರ್ಮನಿ ಮತ್ತು ಫ್ರಾನ್ಸ್ ಒಂದಾಗಿರಬೇಕಾದರೆ, ಭಾರತ ಮತ್ತು ಪಾಕ್ ಒಂದಾಗಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಅವರು, ಭಾರತದೊಂದಿಗೆ ಗೆಳೆತನ ಬೆಳೆಸಲು ಪಾಕ್ ನಲ್ಲಿ ಎಲ್ಲರಿಗೂ ಇಷ್ಟವಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.