Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತದೊಂದಿಗೆ ಗೆಳೆತನ ಬೆಳೆಸಲು ಪಾಕ್ ​ನಲ್ಲಿ ಎಲ್ಲರಿಗೂ ಇಷ್ಟವಿದೆ - ಪ್ರಧಾನಿ ಇಮ್ರಾನ್​ ಖಾನ್

ಭಾರತದೊಂದಿಗೆ ಗೆಳೆತನ ಬೆಳೆಸಲು ಪಾಕ್ ​ನಲ್ಲಿ ಎಲ್ಲರಿಗೂ ಇಷ್ಟವಿದೆ - ಪ್ರಧಾನಿ ಇಮ್ರಾನ್​ ಖಾನ್
ಕರ್ತಾಪುರ , ಗುರುವಾರ, 29 ನವೆಂಬರ್ 2018 (14:25 IST)
ಕರ್ತಾಪುರ : ಭಾರತದ ಜೊತೆ ಯಾವಾಗಲೂ ಶತ್ರುತ್ವ ಸಾಧಿಸುತ್ತಿದ್ದ ಪಾಕಿಸ್ತಾನ ಇದೀಗ ಭಾರತದ ಜೊತೆ ಮಿತ್ರತ್ವ ಹೊಂದಲು ಆಶಿಸುತ್ತಿದೆ.


ಕರ್ತಾಪುರ್​ ಕಾರಿಡಾರ್​ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್ ಅವರು,’ ಉಭಯ ದೇಶಗಳ​ ನಡುವೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಮತ್ತು ಕಾಶ್ಮೀರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲೇ ಪಾಕಿಸ್ತಾನ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.


ಅಲ್ಲದೇ ಭಾರತದೊಂದಿಗೆ ನಾಗರಿಕ ಸಂಬಂಧವನ್ನು ಹೊಂದುವ ಆಶಯ ವ್ಯಕ್ತಪಡಿಸಿದ ಅವರು​, ಕಾಶ್ಮೀರ ವಿಚಾರದಲ್ಲಿ ನೆರೆಯ ದೇಶಗಳು ಸುಮ್ಮನೆ ಇರಲು ಸಾಧ್ಯವಿಲ್ಲ, ಯುದ್ಧವೆಂದು ಹೊರಟರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ, ಹಾಗಾಗಿ ಒಟ್ಟಾಗಿ ಕೆಲಸ ಮಾಡಬೇಕಿದೆ. ಜರ್ಮನಿ ಮತ್ತು ಫ್ರಾನ್ಸ್​ ಒಂದಾಗಿರಬೇಕಾದರೆ, ಭಾರತ ಮತ್ತು ಪಾಕ್​ ಒಂದಾಗಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಅವರು, ಭಾರತದೊಂದಿಗೆ ಗೆಳೆತನ ಬೆಳೆಸಲು ಪಾಕ್​ ನಲ್ಲಿ ಎಲ್ಲರಿಗೂ ಇಷ್ಟವಿದೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ; ಇನ್ನುಮುಂದೆ ಸಿಲಿಂಡರ್ ಗೆ ಪೂರ್ಣ ಹಣ ಪಾವತಿ ಮಾಡಬೇಕಾಗಿಲ್ಲ