ವಾಷಿಂಗ್ಟನ್ : ಟೆಸ್ಲಾ ಮುಖ್ಯಸ್ಥ ಹಾಗೂ ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಟ್ವಿಟ್ಟರ್ನಲ್ಲಿ ಫಾಲೋ ಮಾಡುತ್ತಿದ್ದಾರೆ. ಈ ವಿಷಯ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
87.7 ಮಿಲಿಯನ್ ಫಾಲೋವರ್ಸ್ಗಳನ್ನ ಹೊಂದಿರುವ ಪ್ರಧಾನಿ ಮೋದಿ ಅವರನ್ನು ಟ್ವಿಟರ್ನಲ್ಲಿ ಅತಿ ಹೆಚ್ಚು ಫಾಲೋ ಮಾಡುತ್ತಿರುವ ವಿಶ್ವ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇದೀಗ ಮೋದಿಯನ್ನು ಟ್ವಿಟರ್ ಸಿಇಒ ಎಲೋನ್ ಮಸ್ಕ್ ಫಾಲೋ ಮಾಡುತ್ತಿದ್ದಾರೆ.
ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ಕೇವಲ 195 ಜನರನ್ನ ಮಾತ್ರ ಫಾಲೋ ಮಾಡುತ್ತಿರುವ ಎಲೋನ್ ಮಸ್ಕ್ 134.3 ಮಿಲಿಯನ್ ಫಾಲೋವರ್ಸ್ಗಳನ್ನ ಹೊಂದಿದ್ದಾರೆ. ಮಾರ್ಚ್ ಕೊನೆಯಲ್ಲಿ ಮಸ್ಕ್, ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನ ಹಿಂದಿಕ್ಕಿ ಹೆಚ್ಚು ಫಾಲೋವರ್ಸ್ಗಳನ್ನ ಹೊಂದಿದವರು ಎನಿಸಿಕೊಂಡಿದ್ದರು. ಇದೀಗ 87.7 ಮಿಲಿಯನ್ ಫಾಲೋವರ್ಸ್ಗಳನ್ನ ಹೊಂದಿರುವ ಪ್ರಧಾನಿ ಮೋದಿ ಅವರನ್ನು ಟ್ವಿಟರ್ನಲ್ಲಿ ಫಾಲೋ ಮಾಡುತ್ತಿರುವ ಪ್ರಭಾವಿಗಳಲ್ಲಿ ಎಲೋನ್ ಮಸ್ಕ್ ಒಬ್ಬರಾಗಿದ್ದಾರೆ.