Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಮತ್ತೆ ಡ್ರೋನ್ ಪತ್ತೆ

ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಮತ್ತೆ ಡ್ರೋನ್ ಪತ್ತೆ; ಗಡಿಯಲ್ಲಿ ಕಟ್ಟೆಚ್ಚರ, ಹೆಚ್ಚುವರಿ ಸೇನೆ ನಿಯೋಜನೆ!

ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಮತ್ತೆ ಡ್ರೋನ್ ಪತ್ತೆ
ಜಮ್ಮು-ಕಾಶ್ಮೀರ , ಭಾನುವಾರ, 4 ಜುಲೈ 2021 (09:45 IST)
ಜಮ್ಮು-ಕಾಶ್ಮೀರ (ಜುಲೈ 4); ಕಳೆದ ಜೂನ್ 27 ರಂದು ಮುಂಜಾನೆ 1.40ಕ್ಕೆ ಜಮ್ಮು ವಾಯುನೆಲೆಯ ಮೇಲೆ ಭಯೋತ್ಪಾದಕರು ಡ್ರೋನ್ ದಾಳಿ ನಡೆಸಿದ್ದರು. 6 ನಿಮಿಷಗಳ ಅಂತರದಲ್ಲಿ ಎರಡು ಬಾಂಬ್ ಬ್ಲಾಸ್ಟ್ ಆಗಿದ್ದು, ಇ್ಬಬರು ಸೈನಿಕರು ಗಾಯಕ್ಕೆ ಒಳಗಾಗಿದ್ದರು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಸ್ಪೋಟ 2016ರ ಪಠಾಣ್ ಕೋಟ್ ವಾಯನೆಲೆ ದಾಳಿಯ ಮುಂದು ವರಿಕೆಯಾಗಿದ್ದು, ಇದರ ಹಿಂದೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡ ಇರುವ ಶಂಕೆ ಇದೆ ಎಂದು ಗುಪ್ತಚರ ಇಲಾಖೆ ಉನ್ನತ ಮೂಲಗಳು ಶಂಕೆ ವ್ಯಕ್ತಪಡಿಸಿತ್ತು.













 ಈ ಪ್ರಕರಣದ ತನಿಖೆಗೆಯನ್ನು ಎನ್ಐಎ ಗೆ ವಹಿಸಲಾಗಿದ್ದು, ಎನ್ಐಎ ಅಧಿಕಾರಿಗಳು ಸಹ ಈ ದಾಳಿಯ ಹಿಂದೆ ಜೈಶ್-ಎ-ಮೊಹಮ್ಮದ್ ಸಂಘಟನೆಯ ಕೈವಾಡ ಇದೆ ಎಂಬ ನಿಟ್ಟಿನಲ್ಲಿಯೇ ತನಿಖೆಗೆ ಮುಂದಾಗಿದ್ದಾರೆ. ಆದರೆ, ಈ ನಡುವೆ ಇಂದು ಮತ್ತೆ ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಡ್ರೋನ್ ಪತ್ತೆಯಾಗಿದ್ದು ಈ ಭಾಗದಲ್ಲಿ ಇನ್ನಷ್ಟು ಸೇನೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ನ್ಯೂಸ್ 18 ಗೆ ತಿಳಿಸಿವೆ.
ಜಮ್ಮುವಿನಲ್ಲಿರುವ ಭಾರತದ ವಾಯುಸೇನೆಯ ವಾಯುನೆಲೆಯಲ್ಲಿ ಡ್ರೋನ್ ದಾಳಿಯ ನಡೆದಂದಿನಿಂದಲೇ ಕಣಿವೆ ರಾಜ್ಯದಲ್ಲಿ ಮತ್ತಷ್ಟು ಸೈನ್ಯವನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಿದೆ. ಅಲ್ಲದೆ, ಸಂಭವನೀಯ ದಾಳಿಯನ್ನು ತಡೆಯಲು ರಕ್ಷಣಾ ಇಲಾಖೆ ಮುಂದಾಗಿದೆ ಎನ್ನಲಾಗಿತ್ತು. ಅಷ್ಟರಲ್ಲೇ ಇದೀಗ ಮತ್ತೆ ಸಾಂಬಾ ಜಿಲ್ಲೆಯಲ್ಲಿ ಡ್ರೋನ್ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ (ಐಬಿ) ಪ್ರಮುಖವಾಗಿ ಪಂಜಾಬ್ ಮತ್ತು ಜಮ್ಮು ಪ್ರದೇಶಗಳಲ್ಲಿ ಇಂತಹ ಅನೇಕ ಡ್ರೋನ್ಗಳು ಕಳೆದ ಒಂದು ವರ್ಷದಿಂದ ಪತ್ತೆಯಾಗುತ್ತಲೇ ಇವೆ. ಈ ಎಲ್ಲಾ ಡ್ರೋನ್ಗಳನ್ನು ಬಿಎಸ್ಎಫ್ ಪಡೆ ಹೊಡೆದು ಉರುಳಿಸಿದೆ. ಅಲ್ಲದೆ, ಬಿಎಸ್ಎಫ್ ಕಳೆದ ವರ್ಷ ಜೂನ್ನಲ್ಲಿ ಜಮ್ಮುವಿನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿದ್ದು ದೊಡ್ಡ ಸುದ್ದಿಯಾಗಿತ್ತು.ಪಾಕಿಸ್ತಾನದಲ್ಲಿ ಭಾರತೀಯ ರಾಯಭಾರ ಕಚೇರಿಯೊಳಗೆ ಡ್ರೋನ್ ಕಳ್ಳಪ್ರವೇಶ; ಭಾರತ ಆಕ್ಷೇಪ
ಕಳೆದ ಶನಿವಾರ, ಜುಲೈ 26ರಂದು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯ ಒಳಭಾಗದಲ್ಲಿ ಒಂದು ಡ್ರೋನ್ ಹಾರಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಕುತೂಹಲ ಮತ್ತು ಆತಂಕದ ವಿಚಾರವೆಂದರೆ ರಾಜತಾಂತ್ರಿಕ ಕಚೇರಿಯೊಳಗೆ ಡ್ರೋನ್ ಪತ್ತೆಯಾದ ಒಂದೆರಡು ಗಂಟೆಯಲ್ಲಿ ಜಮ್ಮುವಿನ ಭಾರತೀಯ ವಾಯುನೆಲೆ ಬಳಿ ಡ್ರೋನ್ ದಾಳಿ ನಡೆದು ಕೆಲ ಅನಾಹುತಗಳನ್ನ ಉಂಟು ಮಾಡಿತ್ತು.

 

Share this Story:

Follow Webdunia kannada

ಮುಂದಿನ ಸುದ್ದಿ

ರಫೇಲ್ ಡೀಲ್ನಲ್ಲಿ ಭ್ರಷ್ಟಾಚಾರದ ವಾಸನೆ