ಜಪಾನ್ : ಜಪಾನ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ನೀಡುವವರ ಸಂಖ್ಯೆ ಜಾಸ್ತಿ ಆಗುತ್ತಿರುವ ಹಿನ್ನಲೆಯಲ್ಲಿ ಇದೀಗ ಅದಕ್ಕಾಗಿ ಮೊಬೈಲ್ ಆಪ್ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಕೆಲವು ಯುವತಿಯರು ಕಿರುಕುಳ ನೀಡುತ್ತಿದ್ದರೂ ಬೇರೆಯವರಿಗೆ ಹೇಳಲು ನಾಚಿಕೆಪಟ್ಟುಕೊಳ್ಳುತ್ತಾರೆ. ಅಂತಹ ಮಹಿಳೆಯರ ಸಹಾಯಕ್ಕಾಗಿ ಈ ಮೊಬೈಲ್ ಆಪ್ ನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಡಿಜಿ(digi) ಪೊಲೀಸ್ ಆಪ್ ಎಂದು ಹೆಸರಿಡಲಾಗಿದ್ದು, ಮಹಿಳೆ ಗೆ ಯಾರಾದರೂ ಕಿರುಕುಳ ನೀಡಿದರೆ ತಕ್ಷಣ ಈ ಬಟನ್ ಒತ್ತಿದರೆ ಸಾಕು, ಅದು ನಿಲ್ಲಿಸು ಎಂದು ಜೋರಾಗಿ ಕೂಗಿಕೊಳ್ಳುತ್ತದೆಯಂತೆ. ಹಾಗೂ ಇಲ್ಲೊಬ್ಬ ಕಿರುಕುಳ ನೀಡುತ್ತಿದ್ದಾನೆ ಸಹಾಯ ಮಾಡಿ ಎಂದು ಸ್ಕ್ರೀನ್ ತುಂಬ ತುರ್ತು ಸಂದೇಶ ಬರುತ್ತದಂತೆ. ಅದನ್ನು ಪಕ್ಕದಲ್ಲಿರುವವರಿಗೆ ತೋರಿಸಿ ಸಹಾಯ ಪಡೆಯಬಹುದು.
ಈ ಆಪ್ ಜಪಾನ್ ತುಂಬ ಜನಪ್ರಿಯವಾಗುತ್ತಿದೆ. ಈಗಾಗಲೇ 2 ಲಕ್ಷಕ್ಕಿಂತ ಹೆಚ್ಚು ಜನ ಈ ಆಪ್ ಅನ್ನು ಬಳಸುತ್ತಿದ್ದಾರಂತೆ. ಅತಿ ಹೆಚ್ಚು ಬಳಕೆಯಾಗುತ್ತಿರುವ ಸರ್ಕಾರಿ ಆಪ್ ಇದಾಗಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.