Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪ್ರಧಾನಿ ಮೋದಿ ಬಗ್ಗೆ ಮಾಡಿದ 10 ಉಲ್ಲೇಖಗಳು

ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪ್ರಧಾನಿ ಮೋದಿ ಬಗ್ಗೆ ಮಾಡಿದ 10 ಉಲ್ಲೇಖಗಳು
ವಾಷಿಂಗ್ಟನ್ , ಮಂಗಳವಾರ, 27 ಜೂನ್ 2017 (08:01 IST)
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿ ಶ್ವೇತಭವನಕ್ಕೆ ಆದರದಿಂದ ಬರ ಮಾಡಿಕೊಂಡಿದ್ದಾರೆ. ಎರಡು ದೇಶಗಳ ನಿಯೋಗಗಳ ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಟೀ ನಡೆಸಲಾಯ್ತು. ಈ ಸಂದರ್ಭ ಅಮೆರಿಕ ಅಧ್ಯಕ್ಷರು ಉಲ್ಲೇಖಿಸಿದ ಪ್ರಮುಖ ಅಂಶಗಳು ಇಲ್ಲಿವೆ.

1.ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರದ ನಾಯಕ ನನ್ನನ್ನ ಬರಮಾಡಿಕೊಂಡಿರುವುದು ನನಗೆ ತುಂಬಾ ಗೌರವವೆನಿಸುತ್ತಿದೆ.

2. ನಿಮ್ಮ ದೇಶ, ಜನ, ಸಂಪ್ರದಾಯ ಮತ್ತು ಸಂಸ್ಕೃತಿ ಬಗ್ಗೆ ನನಗೆ ಅತೀವವಾದ ಮೆಚ್ಚುಗೆ ಇದೆ.

3. ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆ ಹೊಂದಿದೆ. ಅಮೆರಿಕ ಶೀಘ್ರದಲ್ಲೇ ಅದನ್ನ ತಲುಪಲಿದೆ.

4. ಇವತ್ತಿನ ಸಭೆ ಬಳಿಕ ನಾನು ಹೇಳುವುದೇನೆಂದರೆ, ಹಿಂದೆಂದೂ ಭಾರತ ಮತ್ತು ಅಮೆರಿಕದ ಸಂಬಂಧ ಇಷ್ಟೊಂದು ಬಲಿಷ್ಠವಾಗಿ, ಉತ್ತಮವಾಗಿರಲಿಲ್ಲ.

5. ಜಂಟಿಯಾಗಿ ಇಸ್ಲಾಂ ಮೂಲಭೂತ ಭಯೋತ್ಪಾದನೆಯನ್ನ ತೊಡೆದು ಹಾಕುತ್ತೇವೆ.

6. ಭಾರತದಲ್ಲಿ ಜಾಗತಿಕ ಉದ್ಯಮಶೀಲತೆಗೆ ಅಮೆರಿಕ ನಿಯೋಗದ ನೇತೃತ್ವ ವಹಿಸುವಂತೆ ನನ್ನ ಪುತ್ರಿ ಇವಾಂಕಾಗೆ ಮೋದಿ ಆಹ್ವಾನ ನೀಡಿದ್ದಾರೆ  ಆಕೆ ಈ ಆಹ್ವಾನ ಒಪ್ಪಿಕೊಂಡಿದ್ದಾಳೆಂದು ನನಗನ್ನಿಸುತ್ತಿದೆ.

7.ನಾನು ಮತ್ತು ನರೇಂದ್ರಮೋದಿ ಸಾಮಾಜಿಕ ಜಾಲತಾಣದಲ್ಲಿ ವಿಶ್ವದ ನಾಯಕರು ಎಂದು ಮಾಧ್ಯಮ, ಅಮೆರಿಕ ಮತ್ತು ಭಾರತದ ಜನರಿಗೆ ತಿಳಿಸಲು ಹೆಮ್ಮೆ ಎನಿಸುತ್ತಿದೆ.

8.ಶ್ವೇತಭವನದಲ್ಲಿ ಭಾರತವು ನಿಜವಾದ ಸ್ನೇಹಿತನನ್ನ ಹೊಂದಿದೆ.

9. ಪರಸ್ಪರ ನಂಬಿಕೆ ಮೇಲೆ ನಡೆದ ಇಂದಿನ ಮಾತುಕತೆ ಅತ್ಯಂತ ಪ್ರಮುಖವಾದದ್ದು.

10. ಭವಿಷ್ಯದಲ್ಲಿ ಭಾರತ ಮತ್ತು ಅಮೆರಿಕ ಒಂದಾಗಿರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಟಿಕೆಟ್ ವಿತರಿಸಲು ಬಿಜೆಪಿಯಿಂದ ಸಮೀಕ್ಷೆ: ಯಡಿಯೂರಪ್ಪ