ಕೀವ್ : ಉಕ್ರೇನ್ನಲ್ಲಿ ಯುದ್ಧ ನಿಲ್ಲದಿದ್ದರೇ ಎಲ್ಲವೂ ಯುರೋಪ್ನ ವಿರುದ್ಧ ಹೋಗುತ್ತದೆ.
ಆದ್ದರಿಂದ ಉಕ್ರೇನ್ಗೆ ಸಹಾಯ ಮಾಡುವುದರ ಮೂಲಕ ನಿಮಗೆ ಸಹಾಯ ಮಾಡಿಕೊಳ್ಳಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದರು.
ಯೂರೋಪ್ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಸ್ಕೋ ಪಡೆಗಳು ಬಾಂಬ್ ದಾಳಿಯನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ರಷ್ಯಾದ ಆಕ್ರಮಣಕಾರಿ ದಾಳಿಯನ್ನು ಎದುರಿಸಲು ಹೆಚ್ಚಿನ ಶಸ್ತ್ರಸ್ತ್ರಗಳ ಅಗತ್ಯವಿದೆ ಎಂದು ಮನವಿ ಮಾಡಿದರು.
ರಷ್ಯಾದ ಬಾಂಬ್ ದಾಳಿಯಿಂದಾಗಿ ಅಪಾರ್ಟ್ಮೆಂಟ್ಗಳು ಹೊತ್ತಿ ಉರಿಯುತ್ತಿದೆ. ನಾಗರಿಕರ ಮೇಲೂ ದಾಳಿನಡೆಯುತ್ತಿದೆ. ದಿನೇ ದಿನೇ ರಷ್ಯಾ ದಾಳಿಗೆ ನಾಗರಿಕರು ಸಾವನ್ನಪ್ಪಿರುವ ಸಂಖ್ಯೆಯೂ ಹೆಚ್ಚುತ್ತಿದೆ.