ಕೊಲರಾಡೋ : ಗೂಗಲ್ ಮ್ಯಾಪ್ ನಂಬಿಕೊಂಡು ಹೋದವರು ಕೆಸರಿನ ಹೊಂಡದಲ್ಲಿ ಸಿಲುಕಿಕೊಂಡ ಘಟನೆಯೊಂದು ಕೊಲರಾಡೋದ ಡೆನ್ವರ್ ಅಂತರಾಷ್ಟೀಯ ವಿಮಾಣ ನಿಲ್ದಾಣದ ಸಮೀಪದಲ್ಲಿ ನಡೆದಿದೆ.
ಕೊಲರಾಡೋದ ಡೆನ್ವರ್ ಅಂತರಾಷ್ಟೀಯ ವಿಮಾಣ ನಿಲ್ದಾಣಕ್ಕೆಂದು ಹೊರಟವರು ಪೆನಾ ಬೌಲ್ವರ್ಡ್ ಎಂಬಲ್ಲಿ ಸಣ್ಣ ಅಪಘಾತ ಆಗಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ಗೂಗಲ್ ಮ್ಯಾಪ್ ಸಹಾಯ ಪಡೆದು ಕಾರು ಚಲಾಯಿಸಿದ್ದಾರೆ. ಆದರೆ ಮಳೆ ಬಂದ ಕಾರಣ ರಸ್ತೆಯಲ್ಲಿ ಹೊಂಡಗಳು ಬಿದ್ದಿದ್ದ ಕಾರಣ ಆ ಹೋಂಡದಲ್ಲಿ ಕಾರು ಸಿಕ್ಕಿಹಾಕಿಕೊಂಡಿದೆ.
ಗೂಗಲ್ ಮ್ಯಾಪ್ ತಪ್ಪಾದ ಮಾರ್ಗ ಸೂಚಿಸಿದ ಹಿನ್ನಲೆಯಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ದರಿಂದ ಗೂಗಲ್ ಮ್ಯಾಪ್ ಬಳಸಿಕೊಂಡು ಬೇರೆ ಕಡೆ ಹೋಗುವವರು ಈ ಬಗ್ಗೆ ಎಚ್ಚರವಾಗಿರಿ.