ಚೀನಾ : ಬ್ಯಾಂಕ್ ಗಳು ಸಾಲ ನೀಡುವಾಗ ಬಂಗಾರ, ಆಸ್ತಿಗಳನ್ನು ಗಿರವಿಯಿಡಲು ಹೇಳುತ್ತಾರೆ. ಆದರೆ ಭಾರತದ ನೆರೆ ರಾಷ್ಟ್ರ ಚೀನಾದ ಕಂಪೆನಿಗಳಲ್ಲಿ ಸಾಲ ನೀಡಲು ಏನನ್ನು ಗಿರವಿಯಿಡಬೇಕು ಎಂಬುದನ್ನು ತಿಳಿದರೆ ದಂಗಾಗ್ತೀರಾ?
ಹೌದು. ಚೀನಾದಲ್ಲಿ ಕೆಲವು ಸಾಲ ನೀಡುವ ಕಂಪನಿಗಳು ಸಾಲ ನೀಡುವ ಮೊದಲು ಜನರಿಂದ ನ್ಯೂಡ್ ಸೆಲ್ಫಿಯನ್ನು ಕಳುಹಿಸಲು ಹೇಳಿದೆ. ಈ ನ್ಯೂಡ್ ಸೆಲ್ಫಿ ಕೊಟ್ಟವರಿಗೆ ಮಾತ್ರ ಸಾಲ ನೀಡುವುದಾಗಿ ತಿಳಿಸಿದೆ. ಒಂದು ವೇಳೆ ಕಂಪನಿಯಿಂದ ಸಾಲ ಪಡೆದು ಅದನ್ನು ನಿಗದಿತ ಸಮಯಕ್ಕೆ ವಾಪಸ್ ಮಾಡದೆ ಹೋದ್ರೆ ನ್ಯೂಡ್ ಫೋಟೋವನ್ನು ಕಂಪನಿ ಲೀಕ್ ಮಾಡಲಿದೆ. ಈ ಬಗ್ಗೆ ಸಾಲಗಾರರಿಗೆ ಮೊದಲೇ ಎಚ್ಚರಿಕೆ ನೀಡಲಾಗುತ್ತದೆ.
ಆದರೆ ಕಂಪೆನಿಯ ಈ ಕಂಡೀಷನ್ ಗೆ ಒಪ್ಪಿ ಅನೇಕ ಹುಡುಗ, ಹುಡುಗಿಯರು ನಾಚಿಕೆ ಬಿಟ್ಟು ನ್ಯೂಡ್ ಸೆಲ್ಫಿಯನ್ನು ಕಂಪನಿಗೆ ಕಳುಹಿಸಿದ್ದಾರೆ. ಅಂತವರಿಗೆ ಕಂಪನಿ ಬೇಕಾದಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.