ಇಂಗ್ಲೆಂಡ್ : ಕಾಲೇಜಿನಿಂದ ಸಸ್ಪೆಂಡ್ ಆಗಿದ್ದಕ್ಕೆ ಬೇಸರಗೊಡ ವಿದ್ಯಾರ್ಥಿಯೊಬ್ಬ ಕುಡಿದು ಮಾಡಿದ ಕೆಲಸವೆನೆಂದು ಕೇಳಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ.
ಹೌದು. 20 ವರ್ಷದ ಬಾರ್ನೆ ರೂಲ್ ಎಂಬಾತ ಎಡಿನ್ಬರ್ಗ್ ಯೂನಿವರ್ಸಿಟಿಯಲ್ಲಿ ಇತಿಹಾಸ ಮತ್ತು ರಾಜಕೀಯ ವಿಷಯದಲ್ಲಿ ಪದವಿ ಓದುತ್ತಿದ್ದ. ಆದರೆ ಅವನನ್ನು ಕಾಲೇಜಿನಿಂದ ಹೊರಹಾಕಿದ್ದಕ್ಕೆ ಬೇಸರಗೊಂಡ ಆತ ಮದ್ಯಪಾನ ಮಾಡಿ ಮನಸ್ಸು ಹಗುರಮಾಡಿಕೊಳ್ಳಲು ವಾಕಿಂಗ್ ಮಾಡಿದ್ದಾನೆ.
ಆದರೆ ಆತ ಕುಡಿದ ಮತ್ತಿನಲ್ಲಿ ನಡೆದು ನಡೆದು 500 ಮೈಲಿ ದೂರವಿರುವ ಫ್ರಾನ್ಸ್ ತಲುಪಿದ್ದಾನೆ. ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂದುಕೊಂಡಿದ್ದ ಆತ ಈ ವಿಚಾರ ತಿಳಿದು ಸಂತಸಗೊಂಡಿದ್ದಾನೆ.