ಜಪಾನ್ : ಮಗು ಹುಟ್ಟಿದ ಖುಷಿಗೆ ಮೊದಲಬಾರಿಗೆ ಜಪಾನಿನ ಸಚಿವರೊಬ್ಬರು ಎರಡು ವಾರಗಳ ಕಾಲ ಅಧಿಕೃತ ಪೆಟರ್ನಿಟಿ ಲೀವ್ ಹಾಕಿದ್ದಾರಂತೆ.
ಹೌದು. ಜಪಾನ್ ನ ಪರಿಸರ ಸಚಿವ ಶಿನ್ಜಿರೋ ಕೊಝೀಮಿ ರಜೆ ಪಡೆದಿರುವ ಸಚಿವ. ಇದೇ ಮೊದಲಬಾರಿಗೆ ಸಚಿವರೊಬ್ಬರು ಪೆಟರ್ನಿಟಿ ಲೀವ್ ತೆಗೆದುಕೊಳ್ಳುವುದರ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಮಕ್ಕಳು ಹುಟ್ಟಿದಾಗ ತಂದೆ ತಾಯಿ ಅವರ ಜೊತೆ ಕಾಲಕಳೆಯಬೇಕು. ಅವರಿಗೆ ಸಮಯ ನೀಡುವುದು ಕೂಡ ನಮ್ಮ ಕರ್ತವ್ಯ. ಇದನ್ನು ಜಪಾನಿನಲ್ಲಿ ಕೆಲಸಮಾಡುತ್ತಿರುವ ಎಲ್ಲಾ ಪೋಷಕರಿಗೂ ತಿಳಿಸುವ ದೃಷ್ಟಿಯಿಂದ ನಾನು ಈ ರೀತಿ ಮಾಡಿದ್ದೇನೆ ಎಂದು ಸಚಿವರು ತಾವು ರಜೆ ತೆಗೆದುಕೊಂಡಿರುವುದಕ್ಕೆ ಕಾರಣ ತಿಳಿಸಿದ್ದಾರೆ.