ಹೆಚ್ಚಿನ ನೀಲಿ ತಲೆ ಹೊದಿಕೆ ಇರುವ ಮೀನುಗಳು ಹೆಣ್ಣಾಗಿ ಜೀವನ ಪ್ರಾರಂಭಿಸುತ್ತವೆ. ಆದರೆ ಸ್ವಲ್ಪ ಸಮಯದ ನಂತರ ಪುರುಷನಾಗಲು ಲೈಂಗಿಕತೆಯನ್ನು ಬದಲಾಯಿಸುತ್ತದೆ. ಈ ಪ್ರಕ್ರಿಯೆಯು ಮುಗಿಸಲು ಅದು 10-21 ದಿನಗಳನ್ನು ತೆಗೆದುಕೊಳ್ಳುತ್ತದೆ. ಗುಂಪಿನಲ್ಲಿ ಪ್ರಬಲ ಪುರುಷನನ್ನು ಕಳೆದುಕೊಂಡಾಗ ಅದರಲ್ಲಿ ದೊಡ್ಡದಾದ ಹೆಣ್ಣು ಮೀನು ಫಲವತ್ತಾದ ಪುರುಷನಾಗಿ ರೂಪಾಂತರಗೊಳ್ಳುತ್ತದೆ. ಈ ರೂಪಾಂತರವನ್ನು ಅವು ನಿಮಿಷದಲ್ಲಿ ಪ್ರಾರಂಭಿಸುತ್ತದೆ.
ಮೊದಲು ಬಣ್ಣವನ್ನು ಬದಲಾಯಿಸುತ್ತವೆ. ನಂತರ ಪುರುಷ ತರಹದ ನಡವಳಿಕೆಯನ್ನ ಪ್ರದರ್ಶಿಸುತ್ತವೆ. ಅವುಗಳ ಅಂಡಾಶಯ ಹೋಗಿ ಆ ಸ್ಥಳದಲ್ಲಿ ಕ್ರಿಯಾತ್ಮಕ ವೃಷಣಗಳು ಬೆಳೆಯುತ್ತವೆ ಎಂದು ನ್ಯೂಜಿಲೆಂಡ್ ನ ಒಟಾಗೊ ವಿಶ್ವವಿದ್ಯಾಲಯದ ಎರಿಕಾ ಟಾಡ್ ಹೇಳಿದ್ದಾರೆ.
ಅಧ್ಯಯನದ ಪ್ರಕಾರ ಈ ವಿದ್ಯಮಾನವು ಕ್ಲೌನ್ ಫಿಶ್ ಮತ್ತು ಕೊಬುಡೈ ಸೇರಿದಂತೆ ಸುಮಾರು 500 ಜಾತಿಯ ಮೀನುಗಳಲ್ಲಿ ಜೀವನ ಚಕ್ರದ ನೈಸರ್ಗಿಕ ಭಾಗವಾಗಿ ಕಂಡುಬರುತ್ತದೆ ಎಂದು ತಿಳಿಸಲಾಗಿದೆ.