Webdunia - Bharat's app for daily news and videos

Install App

ಡೆಲ್ಟಾ ವಿರುದ್ಧ ಎರಡು ಡೋಸ್ ಲಸಿಕೆ ಹೇಗೆ ಹೋರಾಡುತ್ತದೆ ಗೊತ್ತಾ?

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಡೆಲ್ಟಾ ಸೋಂಕಿನ ಪ್ರಭಾವವು ಪ್ರಸ್ತುತ 96 ದೇಶಗಳಲ್ಲಿ ಹಬ್ಬಿದ್ದು ಇಂಗ್ಲೆಂಡ್ನಲ್ಲಿ 90% ಪ್ರಕರಣಗಳೊಂದಿಗೆ ಪ್ರಬಲ ಅಲೆಯಾಗಿ ಕಾಡುತ್ತಿದೆ.

Webdunia
ಭಾನುವಾರ, 11 ಜುಲೈ 2021 (08:07 IST)
ನವದೆಹಲಿ : ಭಾರತದಲ್ಲಿ ಮೊದಲು ಪತ್ತೆಯಾದ ರೂಪಾಂತರವು ಈಗ ಸುಮಾರು 100 ದೇಶಗಳಲ್ಲಿ ಹರಡುತ್ತಿದೆ. ಈ ರೂಪಾಂತರವನ್ನು ಬುಡದಿಂದಲೇ ಮಟ್ಟಹಾಕಲು ವ್ಯಾಕ್ಸಿನೇಶನ್ ಒಂದೇ ಸುರಕ್ಷಿತ ಪರಿಹಾರವಾಗಿದೆ ಎಂದು ತಜ್ಞರು ಹೇಳಿದ್ದಾರೆ.ಭಾರತದಲ್ಲಿ ಮೊದಲು ಪತ್ತೆಯಾದ ಕೊರೋನಾ ವೈರಸ್ ಭಾಗವಾದ ಡೆಲ್ಟಾ ರೂಪಾಂತರವು ಈಗ ಹಲವಾರು ದೇಶಗಳಲ್ಲಿ ಪ್ರಬಲವಾಗಿ ವೇಗವಾಗಿ ಪಸರಿಸುತ್ತಿದ್ದು ವಿಶ್ವದೆಲ್ಲೆಡೆ ಕಳವಳಕಾರಿಯಾಗಿದೆ.

ಆದರೆ ಇದೀಗ ಬಂದಿರುವ ಒಳ್ಳೆಯ ಸುದ್ದಿ ಎಂದರೆ ವ್ಯಾಕ್ಸಿನ್ನ ಎರಡು
ಡೋಸ್ಗಳನ್ನು ಪಡೆಯುವುದರಿಂದ ಈ ವೈರಸ್ ಅನ್ನು ಹೆಡೆಮುರಿ ಕಟ್ಟಿಹಾಕಬಹುದು ಎಂದು ತಿಳಿದುಬಂದಿದೆ. ಆದರೆ ಒಂದೇ ಡೋಸ್ ಲಸಿಕೆ ಹಾಕಿಸಿಕೊಂಡರೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂದು ತಿಳಿದುಬಂದಿದೆ.
ಕೊರೋನಾ ವೈರಸ್ ಸೋಂಕಿಗೆ ಒಳಗಾದವರು ಅಥವಾ ಅದರ ವಿರುದ್ಧ ಲಸಿಕೆ ಪಡೆದ ಜನರಿಂದ ಉತ್ಪಾದನೆಗೊಂಡ ಪ್ರತಿಕಾಯಗಳು ಆಲ್ಫಾ, ಬೀಟಾ, ಡೆಲ್ಟಾ ಮತ್ತು ವೈರಸ್ನ ಮೂಲ ಆವೃತ್ತಿಗೆ ಹೋಲುವ ರೂಪಾಂತರವನ್ನು ಹೇಗೆ ತಟಸ್ಥಗೊಳಿಸುತ್ತವೆ ಎಂಬುದನ್ನು ಅಧ್ಯಯನ ಮಾಡಲು ಫ್ರಾನ್ಸ್ನ ಇನ್ಸ್ಟಿಟ್ಯೂಟ್ ಪಾಶ್ಚರ್ ಸಂಶೋಧಕರು ಪ್ರಯತ್ನಿಸಿದ್ದಾರೆ. ಕೋವಿಡ್ – 19 ಸೋಂಕಿಗೆ ಒಳಗಾದ 103 ಜನರ ರಕ್ತ ನಮೂನೆಗಳನ್ನು ಸಂಶೋಧನೆಗೆ ಒಳಪಡಿಸಿದಾಗ ಇಂಗ್ಲೆಂಡ್ನಲ್ಲಿ ಮೊದಲು ಗುರುತಿಸಲಾದ ಆಲ್ಫಾ ರೂಪಾಂತರಕ್ಕಿಂತಲೂ ಲಸಿಕೆ ಹಾಕಿಸಿಕೊಂಡವರ ಪ್ರತಿಕಾಯಗಳ ಮೇಲೆ ಡೆಲ್ಟಾ ರೂಪಾಂತರವು ಕಡಿಮೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ.
ಕೋವಿಡ್ – 19 ವಿರುದ್ಧ ಒಂದು ಡೋಸ್ ಲಸಿಕೆ ಪಡೆದುಕೊಂಡು ಚೇತರಿಕೆ ಪಡೆದವರ ಅಧ್ಯಯನವನ್ನು ನಡೆಸಿದಾಗ ಇವರುಗಳು ಡೆಲ್ಟಾ ವಿರುದ್ಧ ರೋಗನಿರೋಧಕ ಸಾಮರ್ಥ್ಯವನ್ನು ಪಡೆದುಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಕೋವಿಡ್ನಿಂದ ಚೇತರಿಸಿಕೊಂಡವರು ಲಸಿಕೆಯನ್ನು ಪಡೆದುಕೊಳ್ಳುವುರಿಂದ ಇತರ ಸೋಂಕುಗಳಿಂದ ಪ್ರತಿರಕ್ಷಣೆಯನ್ನು ಪಡೆದುಕೊಳ್ಳಬಹುದು ಎಂಬುದಾಗಿ ಸಂಶೋಧನೆಯು ತಿಳಿಸಿದೆ.
ಆಸ್ಟ್ರಾಜೆನಿಕಾ ಅಥವಾ ಫೈಜರ್ ಲಸಿಕೆಯ ಒಂದು ಅಥವಾ ಎರಡು ಡೋಸ್ ಪಡೆದ 50 ಜನರ ಗುಂಪನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಲಸಿಕೆಗಳ ಒಂದು ಡೋಸ್ ಪಡೆದವರು ಡೆಲ್ಟಾ ಮತ್ತು ಬೀಟಾ ರೂಪಾಂತರಗಳ ವಿರುದ್ಧ ಪ್ರತಿರಕ್ಷಣೆಯನ್ನು ಪಡೆದುಕೊಂಡಿರುವುದು ದೃಢವಾಗಿದ್ದು ಲಸಿಕೆಯ ಎರಡೂ ಡೋಸ್ ಪಡೆದವರ ನ್ಯೂಟ್ರಲೈಸೇಶನ್ ರೇಟ್ 95% ಕ್ಕಿಂತಲೂ ಮಿಗಿಲಾಗಿತ್ತು.
“ಒಂದು ಡೋಸ್ ಫೈಜರ್ ಅಥವಾ ಅಸ್ಟ್ರಾಜೆನೆಕಾ ಲಸಿಕೆಗಳನ್ನು ಪಡೆದವರ ಮಾದರಿಗಳು ಡೆಲ್ಟಾ ರೂಪಾಂತರವನ್ನು ಕೇವಲ ಪ್ರತಿಬಂಧಿಸುತ್ತದೆ. ಎರಡು ಡೋಸ್ಗಳ ಪರಿಣಾಮವು ಶೇಕಡಾ 95ರಷ್ಟು ವ್ಯಕ್ತಿಗಳಲ್ಲಿ ತಟಸ್ಥಗೊಳಿಸುವ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ”ಎಂದು ನೇಚರ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ಹೇಳಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಇತ್ತೀಚಿನ ಅಧ್ಯಯನವು ಈ ಸಂಶೋಧನೆಗಳನ್ನು ದೃಢಪಡಿಸುವಂತೆ ತೋರುತ್ತದೆ. ಏಕೆಂದರೆ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಇಂಜೆಕ್ಷನ್ ಪಡೆದ ಜನರ ಮಾದರಿಯಲ್ಲಿ, 58% ಜನರು ಡೆಲ್ಟಾ ವೇರಿಯಂಟ್ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಹೊಂದಿಲ್ಲ ಎಂದು ಅಧ್ಯಯನವು ತಿಳಿಸಿದೆ. ಈ ಲಸಿಕೆಯನ್ನು ಭಾರತದಲ್ಲಿ ಕೋವಿಶೀಲ್ಡ್ ಆಗಿ ನೀಡಲಾಗುತ್ತದೆ. ಆದರೆ ಎರಡೂ ಪ್ರಮಾಣವನ್ನು ಪಡೆದ ರೋಗಿಗಳಲ್ಲಿ, ಈ ಅಂತರವು 16% ಕ್ಕೆ ಇಳಿದಿದೆ.
ಡೆಲ್ಟಾ ಎಷ್ಟು ಪರಿಣಾಮಕಾರಿಯಾಗಿದೆ? ಅದು ಎಲ್ಲಿ ಹರಡುತ್ತಿದೆ?
ವರದಿಗಳ ಪ್ರಕಾರ ಇದು ಕಳೆದ ವರ್ಷ ಅಕ್ಟೋಬರ್ನಲ್ಲಿ ಭಾರತದಲ್ಲಿ ಕಂಡುಬಂದಿತು. ಡೆಲ್ಟಾ ರೂಪಾಂತರವು ನಂತರ ಇತರ ದೇಶಗಳಲ್ಲಿ ತೀವ್ರವಾಗಿ ಹರಡಿತು. ಅದೂ ಅಲ್ಲದೆ ಇದು ಆಲ್ಫಾ ಅಥವಾ ಕೆಂಟ್ಗಿಂತ 60% ನಷ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ನಂಬಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಡೆಲ್ಟಾ ಸೋಂಕಿನ ಪ್ರಭಾವವು ಪ್ರಸ್ತುತ 96 ದೇಶಗಳಲ್ಲಿ ಹಬ್ಬಿದ್ದು ಇಂಗ್ಲೆಂಡ್ನಲ್ಲಿ 90% ಪ್ರಕರಣಗಳೊಂದಿಗೆ ಪ್ರಬಲ ಅಲೆಯಾಗಿ ಕಾಡುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments