Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರ್ಯಾಂಪ್ ಮೇಲೆ ಹೆಜ್ಜೆಹಾಕಿ ಗಮನ ಸೆಳೆದ ವಿಕಲಚೇತನರು

ರ್ಯಾಂಪ್ ಮೇಲೆ ಹೆಜ್ಜೆಹಾಕಿ ಗಮನ ಸೆಳೆದ ವಿಕಲಚೇತನರು
ನ್ಯೂಯಾರ್ಕ್ , ಶನಿವಾರ, 3 ಜೂನ್ 2017 (15:58 IST)
ನ್ಯೂಯಾರ್ಕ್: ಮಾಡೆಲಿಂಗ್ ಕ್ಷೇತ್ರ ಅಂದ ತಕ್ಷಣ ಸೌಂದರ್ಯ, ಉತ್ತಮವಾದ ದೇಹವೇ ಮುಖ್ಯ ಎಂಬ ಕಲ್ಪನೆ ಬರುವುದು ಸಹಜ. ಆದರೇ ಎಥಿಯೋಪಿಯಾದಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ವಿಕಲ ಚೇತನರು ರ್ಯಾಂಪ್ ಮೇಲೆ ಹೆಜ್ಜೆಹಾಕುವ ಮೂಲಕ ನಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ನಿರೂಪಿಸಿದ್ದಾರೆ.
 
ನ್ಯೂಯಾರ್ಕ್ ನ ಎಥಿಯೋಪಿಯಾದಲ್ಲಿ 28 ದಿವ್ಯಾಂಗರು ಹಾಗೂ 15 ಫ್ಯಾಷನ್ ಡಿಸೈನರ್ ಗಳು ಸೇರಿ ರ್ಯಾಂಪ್ ಶೋ ಏರ್ಪಡಿಸಿದ್ದು ಇದೀಗ ಈ ರ್‍ಯಾಂಪ್ ಶೋ ಜಗತ್ತಿನ ಗಮನ ಸೆಳೆದಿದೆ.
 
ವಿಶೇಷ ಚೇತನರು ಫ್ಯಾಷನ್ ಡಿಸೈನರ್ ಗಳು ಸಿದ್ಧಗೊಳಿಸಿದ್ದ ವಿವಿಧ ಬಗೆಯ ಬಟ್ಟೆಗಳನ್ನು ಧರಿಸಿ, ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿ ಪ್ರೇಕ್ಷಕರ ಮನಸೂರೆಗೊಂಡರು. ವಿಕಲಚೇತನರಿಗೆ ನಿರ್ಧಿಷ್ಟವಾದ ಬಟ್ಟೆಗಳಿರದ ಕಾರಣ ಡಿಸೈನರ್ ಗಳೆ ಕೆಲವು ಹೊಸ ಪ್ರಯೋಗಗಳನ್ನು ಮಾಡಿ ವಿಶೇಷವಾಗಿ ವಿನ್ಯಾಸಮಾಡಿದ್ದರು. ಈ ಶೋನಲ್ಲಿ ಖ್ಯಾತ ವಿನ್ಯಾಸಕಿ ತ್ಸೆಡೆ ಕೆಬೆಡೆ ಅವರು ಡಿಸೈನ್ ಮಾಡಿದ ಬಟ್ಟೆಗಳು ಹೆಚ್ಚಾಗಿ ಪ್ರೇಕ್ಷಕರಿಗೆ ಆಕರ್ಷಣೀಯವೆನಿಸಿರುವುದು ವಿಶೇಷ.

 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ನಾವಿನ್ನೂ ಜನತೆಯ ವಿಶ್ವಾಸ ಉಳಿಸಿಕೊಂಡಿದ್ದೇವೆ: ಸಿಎಂ ಸಿದ್ದರಾಮಯ್ಯ