Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಂಗಳನ ಅಂಗಳದಲ್ಲಿ ವಿಚಿತ್ರ ಕಲ್ಲು ಪತ್ತೆ!

ಮಂಗಳನ ಅಂಗಳದಲ್ಲಿ ವಿಚಿತ್ರ ಕಲ್ಲು ಪತ್ತೆ!
ವಾಷಿಂಗ್ಟನ್ , ಶನಿವಾರ, 5 ನವೆಂಬರ್ 2016 (15:17 IST)
ವಾಷಿಂಗ್ಟನ್: ಮಂಗಳನ ಅಂಗಳದಲ್ಲಿ ವಿಚಿತ್ರ ಕಲ್ಲೊಂದು ಪತ್ತೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಮಂಗಳನಲ್ಲಿನ ರಹಸ್ಯ ಬಿಚ್ಚಿಡುತ್ತಿರುವ ರೋವರ್ ಕ್ಯೂರಿಯಾಸಿಟಿ ಇದೇ ಮೊದಲ ಬಾರಿಗೆ ಅಪರೂಪದ ಮೊಟ್ಟೆಯಾಕಾರದ ಕಲ್ಲೊಂದನ್ನು ಪತ್ತೆಮಾಡಿದೆ.
ಮಂಗಳನ ಅಂಗಳದಲ್ಲಿನ ಕಲ್ಲುಗಳು ಸಾಮಾನ್ಯವಾಗಿ ಕಬ್ಬಿಣ ಮಿಶ್ರಿವಾಗಿರುತ್ತವೆ. ಆದರೆ ಈ ಬಾರಿ ಕ್ಯೂರಿಯಾಸಿಟಿ ಕ್ಯಾಮೆರಾ ಪತ್ತೆ ಮಾಡಿರುವ ಕಲ್ಲು ಅಲ್ಲಿ ದೊರೆಯುವುದೇ ಅತಿ ವಿರಳಾತಿ ವಿರಳವಂತೆ.
 
ಈ ಕಲ್ಲಿನಲ್ಲಿ ಐರನ್, ನಿಕ್ಕೆಲ್, ಫಾಸ್ಫರಸ್ ಸೇರಿದಂತೆ ಇತರೆ ಅಂಶಗಳನ್ನು ಹೊಂದಿದೆ ಎನ್ನಲಾಗಿದೆ. ಕ್ಯೂರಿಯಾಸಿಟಿ ತನ್ನಲ್ಲಿರುವ ಅತ್ಯಾಧುನಿಕ ಮಾಸ್ಟ್ ಕ್ಯಾಮ್ನಿಂದ ಈ ಫೋಟೋವನ್ನು ಸೆರೆಹಿಡಿದಿದೆ ಎಂದು ನಾಸಾ ವಿಜ್ಞಾನಿಗಳು  ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸುದ್ದಿವಾಹಿನಿ ನಿಷೇಧ; ತುರ್ತು ಪರಿಸ್ಥಿತಿ ದಿನ ನೆನಪಿಸುತ್ತದೆ ಎಂದ ಸಂಪಾದಕರ ಸಂಘ