ನವದೆಹಲಿ: ತಂತ್ರಜ್ಞಾನಗಳು ಮನುಷ್ಯನಿಗೆ ಎಷ್ಟು ನೆರವಾಗುತ್ತವೋ, ಎಡವಟ್ಟಾದರೆ ಅಷ್ಟೇ ಕುತ್ತೂ ತರುತ್ತದೆ ಎನ್ನುವುದಕ್ಕೆ ಇದು ತಾಜಾ ಉದಾಹರಣೆ.
ದಕ್ಷಿಣ ಕೊರಿಯಾದಲ್ಲಿ ಕೃಷಿ ಉತ್ಪನ್ನಗಳ ವಿತರಣೆ ಕಂಪನಿಯಲ್ಲಿ ಬಾಕ್ಸ್ ಗಳ ವಿಲೇವಾರಿಗೆ ನಿಯೋಜನೆಗೊಂಡಿದ್ದ ರೋಬೋಟ್ ಒಂದು ಪ್ರೋಗ್ರಾಂ ಮಾಲ್ ಫಂಕ್ಷನ್ ನಿಂದಾಗಿ ಮಾಲಿಕನನ್ನೇ ಕೊಂದು ಹಾಕಿದೆ ಎಂದು ಆಂಗ್ಲ ಮಾಧ್ಯವೊಂದು ವರದಿ ಮಾಡಿದೆ.
ಕೃಷಿ ಉತ್ಪನ್ನಗಳ ಬಾಕ್ಸ್ ನ್ನು ತುಂಬುವ ಕೆಲಸವನ್ನು ರೋಬೋಟ್ ಮಾಡುತ್ತಿತ್ತು. ಅದಕ್ಕಾಗಿ ಪ್ರೋಗ್ರಾಂ ಸೆಟ್ ಮಾಡಲಾಗಿತ್ತು. ಆದರೆ ಪ್ರೋಗ್ರಾಂ ಸೆಟ್ ಮಾಡುವಾಗ ಆದ ಎಡವಟ್ಟಿನಿಂದಾಗಿ ಮಾಲಿಕನನ್ನೇ ಬಾಕ್ಸ್ ಎಂದು ತಪ್ಪಾಗಿ ಭಾವಿಸಿ ರೋಬೋಟ್ ಎತ್ತಿ ಹಾಕಿ ಕೊಂದು ಹಾಕಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಬದುಕಿ ಉಳಿಯಲಿಲ್ಲ ಎಂದು ತಿಳಿದುಬಂದಿದೆ.