ನವದೆಹಲಿ: ಗಡಿಯಲ್ಲಿ ತಂಟೆ ಮಾಡುತ್ತಿದ್ದ ಚೀನಾ ಈಗ ಪ್ರಧಾನಿ ಮೋದಿ-ಅಜಿತ್ ದೋವಲ್ ಟೀಂ ರಂಗಕ್ಕಿಳಿದು ರಣತಂತ್ರ ಹೆಣೆಯುತ್ತಿದ್ದಂತೇ ಬೆಚ್ಚಿ ಹಿಂದೇಟು ಹಾಕಿದೆ.
ಇಷ್ಟು ದಿನ ಸೇನಾಧಿಕಾರಿಗಳ ನಡುವೆ ಮಾತುಕತೆ ಪದೇ ಪದೇ ಮಾತುಕತೆ ವೈಫಲ್ಯವಾಗಿತ್ತು. ಅದರ ಬೆನ್ನಲ್ಲೇ ಚೀನಾ ಲಡಾಕ್ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಜಮಾವಣೆ ಮಾಡಿದ್ದಲ್ಲದೆ, ಹೊಸ ವಾಯುನೆಲೆಗಳ ಸ್ಥಾಪನೆ ಮಾಡಿ ಯುದ್ಧೋತ್ಸಾಹದಲ್ಲಿತ್ತು.
ಆದರೆ ಪ್ರಧಾನಿ ಮೋದಿ ರಕ್ಷಣಾ ಸಚಿವರು, ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿದ್ದಲ್ಲದೆ, ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಕ್ಕಾ ರಣತಂತ್ರ ರೂಪಿಸುತ್ತಿದ್ದಂತೇ ವಿವಾದಕ್ಕೆ ತೇಪೆ ಹಚ್ಚಲು ಮುಂದಾಗಿದೆ. ಇದೀಗ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಹೇಳಿಕೆ ನೀಡಿದೆ.
ಹಿಂದೆಯೂ ಗಡಿ ತಂಟೆ ಮಾಡಿದ್ದ ಚೀನಾಗೆ ಸೇನೆಯ ಮೂಲಕವೇ ಅಜಿತ್ ದೋವಲ್ ಬಿಸಿ ಮುಟ್ಟಿಸಿದ್ದರು. ಈಗ ಮತ್ತೆ ಅಜಿತ್ ದೋವಲ್ ಟೀಂ ರಂಗಕ್ಕಿಳಿದಿರುವುದರಿಂದ ಚೀನಾ ಮೆತ್ತಗಾಗಿದೆ.