ಬೀಜಿಂಗ್ : ಬರೋಬ್ಬರಿ 19 ಮಿಲಿಯನ್ ಡಾಲರ್(ಸುಮಾರು 154 ಕೋಟಿ ರೂ.) ಲಂಚ ಸ್ವೀಕರಿಸಿದ್ದಕ್ಕೆ ಚೀನಾದ ನ್ಯಾಯಾಲಯ ಶುಕ್ರವಾರ ತನ್ನ ಉನ್ನತ ಭದ್ರತಾ ಅಧಿಕಾರಿಯೊಬ್ಬರಿಗೆ 2 ವರ್ಷಗಳ ಕಾಲಾವಕಾಶದೊಂದಿಗೆ ಮರಣದಂಡನೆ ವಿಧಿಸಿದೆ.
ಚೀನಾದ ಸಾರ್ವಜನಿಕ ಭದ್ರತಾ ಮಾಜಿ ಉಪ ಮಂತ್ರಿ ಸನ್ ಲಿಜುನ್ ಲಂಚ, ಷೇರು ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮವಾಗಿ ಬಂದೂಕುಗಳನ್ನು ಹೊಂದಿದ್ದಕ್ಕೆ ಮರಣದಂಡನೆ ವಿಧಿಸಲಾಗಿದೆ.
ಸನ್ ಲಿಜು ಅವರು ತನ್ನ ವೈಯಕ್ತಿಕ ಜೀವನಕ್ಕಾಗಿ ರಾಜಕೀಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಅಧ್ಯಕ್ಷ ಕ್ಸಿಜಿನ್ಪಿಂಗ್ ಅವರಿಗೆ ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ವರದಿಯಾಗಿದೆ.