ನವದೆಹಲಿ: ಗಲ್ವಾನ್ ವ್ಯಾಲಿ ಘರ್ಷಣೆ ಬಳಿಕ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆದು ಉಭಯ ದೇಶಗಳು ಸೇನೆಯನ್ನು ಹಿಂದಕ್ಕೆ ಸರಿಸುವ ಮಾತುಕತೆಯಾಗಿತ್ತು. ಆದರೆ ಗಡಿಯಿಂದ ಹಿಂದೆ ಸರಿದಿರುವುದಾಗಿ ಹೇಳಿರುವ ಚೀನಾ ಲಿಬರೇಷನ್ ಆರ್ಮಿಯ ಬಣ್ಣ ಇದೀಗ ಬಯಲಾಗಿದೆ.
ಪ್ಯಾನ್ ಗಾಂಗ್, ಡೆಪ್ಸಾಂಗ್ ಮತ್ತು ಗೋಗ್ರಾ ಪ್ರದೇಶದಿಂದ ಚೀನಾ ಸೇನೆ ಇನ್ನೂ ಹಿಂದೆ ಸರಿದಿಲ್ಲ. ಫಿಂಗರ್ 8 ಮತ್ತು ಫಿಂಗರ್ 4 ರಿಂದ ಹಿಂದೆ ಸರಿದ ಚೀನಾ ಫಿಂಗರ್ 5 ರಲ್ಲಿ ಬೀಡುಬಿಟ್ಟಿತ್ತು. ಅದಾದ ಬಳಿಕ ತನ್ನ ಸೇನೆಯನ್ನು ಹಿಂದೆ ಸರಿಯುವ ಪ್ರಕ್ರಿಯೆ ನಡೆಸಲೇ ಇಲ್ಲ.
ಡೆಪ್ಸಾಂಗ್ ಪ್ರದೇಶದಲ್ಲಿ ಭಾರತೀಯ ಗಡಿಯೊಳಗೇ ಚೀನಾ ಸೇನೆ ಇನ್ನೂ ಬೀಡುಬಿಟ್ಟಿದೆ. ಗೋಗ್ರಾ ಪ್ರದೇಶದಲ್ಲೂ ಈ ಹಿಂದೆ ಮಾತುಕತೆ ಸಂದರ್ಭದಲ್ಲಿ ಸೇನೆ ಹಿಂದಕ್ಕೆ ಪಡೆಯುವ ಭರವಸೆ ನೀಡಿದ್ದರೂ ಇನ್ನೂ ಆ ಕೆಲಸ ಮಾಡಿಲ್ಲ. ಚೀನಾ ವಿದೇಶಾಂಗ ಸಚಿವ ಮತ್ತು ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವೆಯೇ ಮಾತುಕತೆ ನಡೆದರೂ ಗಡಿಯಲ್ಲಿ ಸೇನೆ ಜಮಾವಣೆ ಮಾತ್ರ ನಿಂತಿಲ್ಲ. ಹೀಗಾಗಿ ಇದೀಗ ಸರ್ಕಾರದ ಮಟ್ಟದಲ್ಲಿ ಮಾತುಕತೆ ಅನಿವಾರ್ಯವಾಗಿದೆ.