ಚೀನಾದ ಜಿಯಾಂಗ್ ಸು ಪ್ರಾಂತ್ಯದ ವೂಕ್ಸಿ ನಗರದ ಶಾಪಿಂಗ್ ಮಾಲ್`ವೊಂದರಲ್ಲಿ ನಡೆದ ನಾಟಕೀಯ ಬೆಳವಣಿಗೆಯ ವಿಡಿಯೋ ಇಂಟರ್ನೆಟ್`ನಲ್ಲಿ ಪ್ರತ್ಯಕ್ಷ ವಾಗಿದ್ದು, ಅಲ್ಲಿನ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಹಿಳೆಯೊಬ್ಬಳು ತನ್ನ ಮಾಜಿ ಪತಿಯನ್ನ ಕಂಡು ಅವನ ಬಳಿಗೆ ಬಂದಿದ್ದಾಳೆ. ಈ ಸಂದರ್ಭ ಆತ ನೀನು ಬಳಸುತ್ತಿರುವ ಮೊಬೈಲ್ ಮತ್ತು ಹಾಕಿಕೊಂಡಿರುವ ಬಟ್ಟೆ ನನ್ನದೆಂದು ಜಗಳ ತೆಗೆದು ಕಪಾಳಕ್ಕೆ ಹೊಡೆದಿದ್ದಾನೆ. ಇದಕ್ಕೆ ಪ್ರತಿಯಾಗಿ ಮೊಬೈಲ್ ಬಿಸಾಡಿದ ಮಹಿಳೆ ಬಳಿಕ ಬಟ್ಟೆಯನ್ನೂ ಬಿಚ್ಚಿ ಕೊಟ್ಟಿದ್ದಾಳೆ. ಮಹಿಳೆ ಒಂದೊಂದೇ ಬಟ್ಟೆ ಬಿಚ್ಚುತ್ತಿದ್ದದ್ದನ್ನ ಗಮನಿಸಿದ ಜನ ಅಕ್ಷರಶಃ ಬೆಚ್ಚಿಬಿದ್ದಿದ್ಧಾರೆ.
ಈ ಸಂದರ್ಭ ಒಳ ಉಡುಪನ್ನೂ ಬಿಚ್ಚಲು ಯತ್ನಿಸಿದ ಮಹಿಳೆಯನ್ನ ಮಾಜಿ ಪತಿ ತಡೆಯಲು ಯತ್ನಿಸಿದ್ದಾನೆ. ಆದರೂ ಸಾಧ್ಯವಾಗಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ