ವಾಷಿಂಗ್ಟನ್: ಪಿಜ್ಜಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಸರು ಕೇಳಿದ್ರೆ ಎಷ್ಟು ಜನರಿಗೆ ಬಾಯಲ್ಲಿ ನೀರೂರಲ್ಲ. ಈಗ್ ಇಲ್ಲಿ ಹೇಳ್ತಿರೋ ಪಿಜ್ಜಾ ಗಿನ್ನೀಸ್ ದಾಖಲೆ ನಿರ್ಮಿಸಿದೆ. ಅದು ಎಷ್ಟು ಉದ್ದವಿರಬಹುದು ಹೇಳಿ. ಬರೋಬ್ಬರಿ1,930 ಮೀಟರ್ ಉದ್ದದ ಪಿಜ್ಜಾ ಕಣ್ರಿ ವ್ಹಾವ್..ಅಲ್ವಾ..
ಕ್ಯಾಲಿಫೋರ್ನಿಯಾದಲ್ಲಿ ನಿರ್ಮಿಸಲಾದ ಈ ಪಿಜ್ಜಾ ವಿಶ್ವದ ಅತಿ ಉದ್ದದ ಪಿಜ್ಜಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಗಿನ್ನೀಸ್ ದಾಖಲೆ ನಿರ್ಮಿಸಿದೆ. ಇದಕ್ಕಾಗಿ 3,632 ಕೆ.ಜಿ. ನಾದಿದ ಹಿಟ್ಟು, 1,634 ಕೆ.ಜಿ. ಚೀಸ್ ಹಾಗೂ 2,542 ಕೆ.ಜಿ. ಸಾಸ್ ಬಳಸಲಾಗಿದ್ದು, 100ಕ್ಕೂ ಹೆಚ್ಚು ಬಾಣಸಿಗರು ಇದನ್ನು ತಯಾರಿಸಿದ್ದಾರೆ. ಇನ್ನೂ ವಿಶೇಷ ಅಂದ್ರೆ ಕೈಗಾರಿಕೆಗಳಲ್ಲಿ ಬಳಸುವ ಮೂರು ಓವನ್‌ಗಳನ್ನು ಬಳಸಿ ಸತತ 8 ತಾಸುಗಳ ಕಾಲ ಈ ಪಿಜ್ಜಾವನ್ನು ಬೇಯಿಸಲಾಗಿದೆ. ಫೈನಲಿ ಈ ಪಿಜ್ಜಾವನ್ನು ಸ್ಥಳೀಯ ಆಹಾರ ಕೇಂದ್ರಗಳು ಹಾಗೂ ನಿರಾಶ್ರಿತರ ವಸತಿ ಕೇಂದ್ರಗಳಿಗೆ ಹಂಚಲಾಗಿದೆ.
ಅಮೆರಿಕ ಮೂಲದ ‘Pizzaovens.com’ ಎನ್ನುವ ರೆಸ್ಟೊರೆಂಟ್ ಪರಿಕರಗಳ ಕಂಪೆನಿ ಈ ದಾಖಲೆ ಪ್ರಮಾಣದ ಪಿಜ್ಜಾ ತಯಾರಿಸಿದೆ. ಪಿಜ್ಜಾದ ಮೂಲವಾಗಿರುವ ಇಟಲಿಯಲ್ಲಿ ಈ ಹಿಂದೆ ತಯಾರಿಸಿದ್ದ 1,853.88 ಮೀ. ಉದ್ದದ ಪಿಜ್ಜಾ ಗಿನ್ನೆಸ್ ಸೇರಿತ್ತು. ಆ ದಾಖಲೆಯನ್ನು ಇದು ಮುರಿದಿದೆ.